Asianet Suvarna News Asianet Suvarna News

ವಾಹನ ಸವಾರರಿಗೆ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಈ ಬಾರಿ ಇಳಿಕೆಯಾಗಿದ್ದು, ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ದರ ಇಳಿಕೆ ಮಾಡಲಾಗಿದೆ.

Petrol and diesel price cut by 2 rupees 16 paisa and 2 rupees 10 paisa
  • Facebook
  • Twitter
  • Whatsapp

ನವದೆಲಿ(ಮೇ.16): ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಈ ಬಾರಿ ಇಳಿಕೆಯಾಗಿದ್ದು, ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ದರ ಇಳಿಕೆ ಮಾಡಲಾಗಿದೆ.

ಪೆಟ್ರೋಲ್ ಬೆಲೆಯಲ್ಲಿ 2.16 ರೂಪಾಯಿ ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆಯಲ್ಲೂ ರೂಪಾಯಿ 2.10 ಕಡಿತವಾಗಿದೆ. ಈ ಹಿಂದೆ ಮೇ 1ರಂದು ಪೆಟ್ರೋಲ್ ಬೆಲೆಯಲ್ಲಿ ಎರಡು ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 52 ಪೈಸೆ ಏರಿಕೆಯಾಗಿತ್ತು. ಅದಕ್ಕೂ ಮೊದಲು ಏಪ್ರಿಲ್ 16ರಂದು ಪೆಟ್ರೋಲ್ 1.39 ರೂಪಾಯಿ ಹಾಗೂ ಡೀಸೆಲ್ ಬೆಲೆಯಲ್ಲಿ ರೂಪಾಯಿ 1.04 ಏರಿಕೆಯಾಗಿತ್ತು.

ಅಂತರಾಷ್ಟ್ರೀಯ ಕಚ್ಛಾತೈಲ ದರ ಹಾಗೂ ರೂಪಾಯಿ-ಡಾಲರ್ ಮೌಲ್ಯವನ್ನು ಆಧರಿಸಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಈ ವ್ಯತ್ಯಾಸವಾಗಿದೆ.

 

Follow Us:
Download App:
  • android
  • ios