Asianet Suvarna News Asianet Suvarna News

ಡೀಸೆಲ್ ಸಾರ್ವಕಾಲಿಕ, ಪೆಟ್ರೋಲ್ ಮೂರು ವರ್ಷಗಳಲ್ಲೇ ಗರಿಷ್ಠ ಏರಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮತ್ತು ಪೆಟ್ರೋಲ್ ಬೆಲೆ ಮೂರೂವರೆ ವರ್ಷಗಳ ಗರಿಷ್ಠ ಮಟ್ಟ ತಲುಪಿದೆ.

Petro Diesel Price Hike

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮತ್ತು ಪೆಟ್ರೋಲ್ ಬೆಲೆ ಮೂರೂವರೆ ವರ್ಷಗಳ ಗರಿಷ್ಠ ಮಟ್ಟ ತಲುಪಿದೆ.

ಡೀಸೆಲ್ ಬೆಲೆ 61.74 ರು.ಗೆ ಹೆಚ್ಚಳ ಕಂಡಿದೆ. ದೇಶದ ನಾಲ್ಕು ಮಹಾನಗರಗಳ ಪೈಕಿ ದೆಹಲಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ. ಮುಂಬೈನಲ್ಲಿ ಸ್ಥಳೀಯ ತೆರಿಗೆ ಹಾಗೂ ವ್ಯಾಟ್ ಹೇರಿಕೆಯಾಗುವುದರಿಂದ ಲೀಟರ್ ಡೀಸೆಲ್ ಬೆಲೆ 65.74 ರು.ಗೆ ಜಿಗಿದಿದೆ. ಸೋಮವಾರ ಲೀಟರ್ ಪೆಟ್ರೋಲ್ ಬೆಲೆ 71.18 ಲೀಟರ್‌ಗೆ ಏರಿಕೆ ಯಾಗಿದೆ.

2014ರ ಆಗಸ್ಟ್ ನಂತರ ಪೆಟ್ರೋಲ್ ಈ ಮಟ್ಟ ಮುಟ್ಟಿರುವುದು ಇದೇ ಮೊದಲು. ಈ ಬೆಳವಣಿಗೆ ಬೆನ್ನಲ್ಲೇ ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿ, ಜನಸಾಮಾನ್ಯರ ಮೇಲಿನ ಹೊರೆ ತಗ್ಗಿಸಬೇಕು ಎಂಬ ಬೇಡಿಕೆ ತೀವ್ರವಾಗತೊಡಗಿದೆ.

Follow Us:
Download App:
  • android
  • ios