ನ್ಯೂಯಾರ್ಕ್[ಫೆ.13]: ಕೈ ಸ್ಪಲ್ಪ ಕೊಳೆಯಾದರೂ ಅಸಹ್ಯ ಎನಿಸುತ್ತೆ. ಆದರೆ, ಅಮೆರಿಕದ ಫಾಕ್ಸ್‌ ನ್ಯೂಸ್‌ನ ನಿರೂಪಕ ಪೀಟ್‌ ಹೆಗ್ಸೆತ್‌ ಎಂಬಾತ 10 ವರ್ಷದಿಂದ ಕೈಯನ್ನೇ ತೊಳೆದಿಲ್ಲವಂತೆ. ಫ್ರಿಜ್‌ನಲ್ಲಿ ಇಟ್ಟಿರದ ಅಳಿದುಳಿದ ಪಿಜ್ಜಾ ತಿಂದಿದ್ದಕ್ಕೆ ಸ್ನೇಹಿತರು ಹೆಗ್ಸೆತ್‌ರನ್ನು ಲೇವಡಿ ಮಾಡಿದ್ದರು.

ಇದಕ್ಕೆ ಭಾನುವಾರ ‘ಫಾಕ್ಸ್‌ ಆ್ಯಂಡ್‌ ಫ್ರೆಂಡ್ಸ್‌’ ಕಾರ್ಯಕ್ರಮದಲ್ಲಿ ಉತ್ತರಿಸಿದ ಹೆಗ್ಸೆತ್‌ ‘ಕಣ್ಣಿಗೆ ಕಾಣದ ರೋಗಾಣುಗಳ ಮೇಲೆ ನನಗೆ ನಂಬಿಕೆ ಇಲ್ಲ. ಇಂದಿನ ದಿನಗಳಲ್ಲಿ ಜನರು ಕಿಸೆಯಲ್ಲಿ ಕೈ ತೊಳೆಯುವ ಶಾಂಪು ಇಟ್ಟುಕೊಂಡು ಓಡಾಡುತ್ತಾರೆ. ದಿನಕ್ಕೆ 19 ಸಾವಿರ ಬಾರಿ ಕೈ ತೊಳೆದುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಅವರ ಜೀವ ಉಳಿಯುತ್ತದೆಯೇ ಎಂದು ಪ್ರಶ್ನಿಸಿದ್ದಾರೆ?

ಈ ಹೇಳಿಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಗ್ಸೆತ್‌ ಗೇಲಿಗೆ ಒಳಗಾಗಿದ್ದಾರೆ.