Published : Jun 04 2017, 10:56 AM IST| Updated : Apr 11 2018, 12:38 PM IST
Share this Article
FB
TW
Linkdin
Whatsapp
ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾಮುಕ ಕಾಶ್ಮೀರ ಮೂಲದ ಹಬೀಬ್‌ ಗನಿ (28) ಯುವತಿಯರ ಮೊಬೈಲ್‌ ಸಂಖ್ಯೆ ಪಡೆಯಲು ‘ನೌಕ್ರಿ ಡಾಟ್‌ ಕಾಮ್‌' ವೆಬ್‌ಸೈಟ್‌ ಬಳಸಿಕೊಳ್ಳುತ್ತಿದ್ದ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಉದ್ಯೋಗಾಂಕ್ಷಿ ಯುವತಿಗೆ ಸಂದರ್ಶನ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆರೋಪಿ ಹಬೀಬ್‌ನನ್ನು ಮೈಕೋ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು(ಜೂ.04): ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾಮುಕ ಕಾಶ್ಮೀರ ಮೂಲದ ಹಬೀಬ್ ಗನಿ (28) ಯುವತಿಯರ ಮೊಬೈಲ್ ಸಂಖ್ಯೆ ಪಡೆಯಲು ‘ನೌಕ್ರಿ ಡಾಟ್ ಕಾಮ್' ವೆಬ್ಸೈಟ್ ಬಳಸಿಕೊಳ್ಳುತ್ತಿದ್ದ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಉದ್ಯೋಗಾಂಕ್ಷಿ ಯುವತಿಗೆ ಸಂದರ್ಶನ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆರೋಪಿ ಹಬೀಬ್ನನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಮೊಬೈಲ್ನಲ್ಲಿ 300ಕ್ಕೂ ಹೆಚ್ಚು ಯುವತಿಯರು, ಮಹಿಳೆಯರ ಮೊಬೈಲ್ ನಂಬರ್ ಇತ್ತು. ಯುವತಿಯರ ಜತೆ ಮಾತನಾಡಲು, ಸಂದೇಶ ಕಳುಹಿಸಲೆಂದೇ ಪ್ರತ್ಯೇಕ್ ಸಿಮ್, ಮೊಬೈಲನ್ನು ಆರೋಪಿ ಹೊಂದಿದ್ದ. ಉದ್ಯೋಗ ಅರಸಿ ಯುವತಿಯರು ‘ನೌಕ್ರಿಡಾಟ್ಕಾಮ್'ನಲ್ಲಿ ತಮ್ಮ ವಿವರ ಹಾಕುತ್ತಿದ್ದರು. ಈ ಯುವತಿಯರ ಮೊಬೈಲ್ ನಂಬರ್ಗಳನ್ನು ಹಬೀಬ್ ಕದ್ದಿಯುತ್ತಿದ್ದ. ಹಲವಾರು ಕಂಪನಿಯಲ್ಲಿ ಉದ್ಯೋಗಗಳು ಖಾಲಿ ಇವೆ. ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸುತ್ತಿದ್ದ. ಹೀಗೆ ನಂಬಿಸಿ ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳಲು ಯತ್ನಿಸುತ್ತಿದ್ದ. ಉದ್ಯೋಗದ ಅಗತ್ಯ ಇದ್ದ ಕಾರಣ ಹೆಣ್ಣುಮಕ್ಕಳು ಕೂಡ ಈತನೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತಾ ಸಂದೇಶ ಕಳುಹಿಸುತ್ತಿದ್ದರು. ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾಮುಕ ಕಾಶ್ಮೀರ ಮೂಲದ ಹಬೀಬ್ ಗನಿ (28) ಯುವತಿಯರ ಮೊಬೈಲ್ ಸಂಖ್ಯೆ ಪಡೆಯಲು ‘ನೌಕ್ರಿ ಡಾಟ್ ಕಾಮ್' ವೆಬ್ಸೈಟ್ ಬಳಸಿಕೊಳ್ಳುತ್ತಿದ್ದ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಉದ್ಯೋಗಾಂಕ್ಷಿ ಯುವತಿಗೆ ಸಂದರ್ಶನ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆರೋಪಿ ಹಬೀಬ್ನನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಮೊಬೈಲ್ನಲ್ಲಿ 300ಕ್ಕೂ ಹೆಚ್ಚು ಯುವತಿಯರು, ಮಹಿಳೆಯರ ಮೊಬೈಲ್ ನಂಬರ್ ಇತ್ತು. ಯುವತಿಯರ ಜತೆ ಮಾತನಾಡಲು, ಸಂದೇಶ ಕಳುಹಿಸಲೆಂದೇ ಪ್ರತ್ಯೇಕ್ ಸಿಮ್, ಮೊಬೈಲನ್ನು ಆರೋಪಿ ಹೊಂದಿದ್ದ. ಉದ್ಯೋಗ ಅರಸಿ ಯುವತಿಯರು ‘ನೌಕ್ರಿಡಾಟ್ಕಾಮ್'ನಲ್ಲಿ ತಮ್ಮ ವಿವರ ಹಾಕುತ್ತಿದ್ದರು. ಈ ಯುವತಿಯರ ಮೊಬೈಲ್ ನಂಬರ್ಗಳನ್ನು ಹಬೀಬ್ ಕದ್ದಿಯುತ್ತಿದ್ದ. ಹಲವಾರು ಕಂಪನಿಯಲ್ಲಿ ಉದ್ಯೋಗಗಳು ಖಾಲಿ ಇವೆ. ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸುತ್ತಿದ್ದ. ಹೀಗೆ ನಂಬಿಸಿ ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳಲು ಯತ್ನಿಸುತ್ತಿದ್ದ. ಉದ್ಯೋಗದ ಅಗತ್ಯ ಇದ್ದ ಕಾರಣ ಹೆಣ್ಣುಮಕ್ಕಳು ಕೂಡ ಈತನೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತಾ ಸಂದೇಶ ಕಳುಹಿಸುತ್ತಿದ್ದರು. ಆರೋಪಿ ವರ್ತನೆಯಿಂದ ಬೇಸತ್ತು ಕೆಲವರು ಆತನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಲೀಸ್ಟ್ಗೆ ಸೇರಿಸಿದ್ದರು. ಆತನ ಮೊಬೈಲ್, ಕರೆಗಳ ವಿವರ ಪರಿಶೀಲನೆ ನಡೆಸಿದಾಗ ಒಬ್ಬನೇ ಒಬ್ಬ ಯುವಕನ ಮೊಬೈಲ್ ನಂಬರ್ ಇರಲಿಲ್ಲ. ಕೆಲ ಯುವತಿಯರಿಗೆ ಕರೆ ಮಾಡಿ ವಿಚಾರಿಸಿದಾಗ ಕೆಲಸ ಕೊಡಿಸುವುದಾಗಿ ಪರಿಚಯಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿ ಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಬಗ್ಗೆ ಇಲ್ಲಿ ತನಕ ಯಾರು ಕೂಡ ದೂರು ದಾಖಲಿಸಿಲ್ಲ ಎಂದು ಮಾಹಿತಿ ನೀಡಿದರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವರ ಪುತ್ರ ಈ ಕಾಮುಕ!
ಆರೋಪಿ ಹಬೀಬ್ ಜಮ್ಮು ಕಾಶ್ಮೀರದ ಮಾಜಿ ಸಚಿವ ಅಬ್ದುಲ್ ಗನಿ ಅವರ ಪುತ್ರ ಎಂಬುದು ವಿಚಾರಣೆಯಲ್ಲಿ ಬಯಲಾಗಿದೆ. ಆರಂಭದಲ್ಲಿ ಆರೋಪಿ ತನ್ನ ತಂದೆ ವಕೀಲರು ಎಂದು ಹೇಳಿಕೊಂಡಿದ್ದ. ತೀವ್ರ ವಿಚಾರಣೆಗೊಳಪಡಿಸಿದಾಗ ಮಾಜಿ ಸಚಿವರ ಪುತ್ರ ಎಂದು ಬಾಯ್ಬಿಟ್ಟಿದ್ದಾನೆ. 2008ರಲ್ಲಿ ಆಡಳಿತ ನಡೆಸಿದ ಗುಲಾಂ ನಬಿ ಆಜಾದ್ ನೇತೃತ್ವದ ಸರ್ಕಾರದಲ್ಲಿ ಅಬ್ದುಲ್ ಗನಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಇವರ ಪುತ್ರನಾದ ಹಬೀಬ್ ಗನಿ ಉತ್ತರ ಪ್ರದೇಶದಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡಿ ಬೆಂಗಳೂರಿಗೆ ಬಂದು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.