ಬೆಂಗಳೂರು[ಮಾ.24]: ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ತನ್ನ ಮಾಜಿ ಪ್ರಿಯ ತಮೆಯ ಭಾವಚಿತ್ರಗಳನ್ನು ಪ್ರಕಟಿಸಿ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಯುವಕನೊ ಬ್ಬನನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುರುಬರಹಳ್ಳಿ ನಿವಾಸಿ ರೋಹಿತ್ ಕುಮಾ ರ್ ಬಂಧಿತನಾಗಿದ್ದು, ತನ್ನ ಮಾಜಿ ಪ್ರಿಯತಮೆ ಪೋಟೋಗಳನ್ನು ಫೆ.೨೭ರಂದು ಆಶ್ಲೀಲ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೊದಲು ರೋಹಿತ್ ಹಾಗೂ ದೂರುದಾರ ಯುವತಿ ಪ್ರೀತಿಸುತ್ತಿದ್ದರು. ಆದರೆ ಇತ್ತೀಚಿಗೆ ಆರೋಪಿ ನಡವಳಿಕೆಯಿಂದ ಬೇಸತ್ತು ಸಂತ್ರಸ್ತೆ, ರೋಹಿತ್ ಸಂಪರ್ಕ ತೊರೆದಿದ್ದಳು. ಇದರಿಂದ ಕೆರಳಿದ ಆರೋಪಿ, ಪ್ರಿಯತಮೆ ಬಳಿ ಹೋಗಿ ಗಲಾಟೆ ಮಾಡಿದ್ದ. ಅಲ್ಲದೆ, ಪ್ರೀತಿಸುವಾಗ ತಾವು ತೆಗೆದುಕೊಂಡಿದ್ದ ಪೋಟೋಗಳನ್ನು ಆಕೆಯ ಮೊಬೈಲ್ ಸಮೇತ ಆಶ್ಲೀಲ ವೆಬ್ ಸೈಟ್‌ಗಳಿಗೆ ಆರೋಪಿ ಆಪ್ ಲೋಡ್ ಮಾಡಿದ್ದ. ಕೆಲವರು ಸಂತ್ರಸ್ತೆ ಮೊಬೈಲ್‌ಗೆ ಕರೆ ಮಾಡಿ ಅಸಹ್ಯವಾಗಿ ಸಂಭಾಷಣೆ ನಡೆಸಿದ್ದರು.