ಅಮೃತಹಳ್ಳಿ ಸರ್ಕಾರಿ ಶಾಲೆ ಸಮೀಪದಲ್ಲಿರುವ ಮೈದಾನದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ. ಅಮೃತಹಳ್ಳಿ ನಿವಾಸಿ ಶಂಕರಪ್ಪ (45) ಮೃತ ದುರ್ದೈವಿ. ತನ್ನ ಪತಿ ಸಾವಿಗೆ ಸ್ಥಳೀಯ ಬ್ಯಾಟರಾಯನಪುರ ಪಾಲಿಕೆ ಸದಸ್ಯ ಪಿ.ವಿ. ಮಂಜುನಾಥ್ ಕಾರಣ ಎಂದು ಮೃತರ ಪತ್ನಿ ಆರೋಪಿಸಿದ್ದಾರೆ.
ಬೆಂಗಳೂರು(ಆ.25): ಅಮೃತಹಳ್ಳಿ ಸರ್ಕಾರಿ ಶಾಲೆ ಸಮೀಪದಲ್ಲಿರುವ ಮೈದಾನದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ. ಅಮೃತಹಳ್ಳಿ ನಿವಾಸಿ ಶಂಕರಪ್ಪ (45) ಮೃತ ದುರ್ದೈವಿ. ತನ್ನ ಪತಿ ಸಾವಿಗೆ ಸ್ಥಳೀಯ ಬ್ಯಾಟರಾಯನಪುರ ಪಾಲಿಕೆ ಸದಸ್ಯ ಪಿ.ವಿ. ಮಂಜುನಾಥ್ ಕಾರಣ ಎಂದು ಮೃತರ ಪತ್ನಿ ಆರೋಪಿಸಿದ್ದಾರೆ.
ಶಂಕರಪ್ಪ ಕಂಬಿ ಕಟ್ಟುವ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ, ಕುಡಿತದ ಚಟಕ್ಕೆ ಬಿದ್ದಿದ್ದರು. ಹೀಗಾಗಿ ಬುಧವಾರ ತಡರಾತ್ರಿ ಅಮೃತಹಳ್ಳಿ ಸರ್ಕಾರಿ ಶಾಲೆ ಸಮೀಪದಲ್ಲಿರುವ ಮೈದಾನದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಶಂಕರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಲಾಗಿದೆ ಎಂದು ಅಮೃತ್‌ಹಳ್ಳಿ ಪೊಲೀಸರು ತಿಳಿಸಿದರು. ಮೃತ ಶಂಕರಪ್ಪ ಅವರ ಪತ್ನಿ ಸರಸ್ವತಿ, ಪಾಲಿಕೆ ಸದಸ್ಯ ಮಂಜುನಾಥ್ ಅವರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದರು. ಒಂದು ತಿಂಗಳ ಹಿಂದೆ ಮಂಜುನಾಥ್ ಅವರ ಮನೆಯಲ್ಲಿ 50 ಲಕ್ಷದಷ್ಟು ಚಿನ್ನಾಭರಣ ಕಳವು ಆಗಿತ್ತು. ಈ ಸಂಬಂ‘ ಮಂಜುನಾಥ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮನೆ ಕೆಲಸ ಮಾಡುವ ಸರಸ್ವತಿ ಮತ್ತು ನಳಿನಿ ಎಂಬುವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕಳವು ಕೃತ್ಯ ಬಯಲಾಗಿತ್ತು. ನಳಿನಿ ಚಿನ್ನಾಭರಣ ಕದ್ದು, ಸರಸ್ವತಿಗೆ ನೀಡಿದ್ದಳು. ಸರಸ್ವತಿ ಕದ್ದ ಚಿನ್ನಾ‘ರಣವನ್ನು ಗಿರವಿ ಅಂಗಡಿಯಲ್ಲಿ ಇಟ್ಟು ಹಣ ಪಡೆದಿದ್ದರು. ಮನೆ ಕೆಲಸದವರೇ ಆದ ಕಾರಣ ಪಾಲಿಕೆ ಸದಸ್ಯ ಮಂಜುನಾಥ್ ಬಳಿಕ ದೂರು ವಾಪಸ್ ಪಡೆದಿದ್ದರು ಎಂದು ಪೊಲೀಸರು ತಿಳಿಸಿದರು.
