ಕಷ್ಟದ ಕಾಲ ಬಂದಾಗ ಚಿನ್ನ ಅಡವಿಟ್ಟು ಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆಯುವುದು ಕಾಮಾನ್​. ಹೀಗೆ ಸಾಲ ಪಡೆಯಲು ಇಟ್ಟ ಬಂಗಾರದವನ್ನ ಖಾಸಗಿ ಫೈನಾನ್ಸ್​ನವರು ಯಾವುದೇ ನೊಟೀಸ್​​ ನೀಡದೇ ಹರಾಜು ಮಾಡಿದ್ದಾರೆ  ಎಂಬ ಆರೋಪ ಕೇಳಿಬಂದಿದೆ. ಆ ಫೈನಾನ್ಸ್ ಕಂಪನಿ ಯಾವುದು ಅಂತೀರಾ ಈ ಸ್ಟೋರಿ ನೋಡಿ.

ಚಿತ್ರದುರ್ಗ(ಜ.23): ಕಷ್ಟದ ಕಾಲ ಬಂದಾಗ ಚಿನ್ನ ಅಡವಿಟ್ಟು ಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆಯುವುದು ಕಾಮಾನ್​. ಹೀಗೆ ಸಾಲ ಪಡೆಯಲು ಇಟ್ಟ ಬಂಗಾರದವನ್ನ ಖಾಸಗಿ ಫೈನಾನ್ಸ್​ನವರು ಯಾವುದೇ ನೊಟೀಸ್​​ ನೀಡದೇ ಹರಾಜು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆ ಫೈನಾನ್ಸ್ ಕಂಪನಿ ಯಾವುದು ಅಂತೀರಾ ಈ ಸ್ಟೋರಿ ನೋಡಿ.

ಚಿತ್ರದುರ್ಗ ಜಿಲ್ಲೆ ಜನರು ಒಂದೆಡೆ ಬರದಿಂದ ತತ್ತರಿಸಿ ಹೋಗಿದ್ದಾರೆ. ಮತ್ತೊಂದು ಕಡೆ ನೋಟ್​ಬ್ಯಾನ್​ನಿಂದಾಗಿ ಪಡೆದುಕೊಂಡು ಸಾಲ ಮರುಪಾವತಿಸಲಾಗದೇ ಪರದಾಡುತ್ತಿದ್ದಾರೆ. ಇಂಥಾ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಐಐಎಫ್ಎಲ್ ಫೈನಾನ್ಸ್ , ಬಡ್ಡಿ ಕಟ್ಟಲು ವಿಳಂಬ ಮಾಡುತ್ತಿರುವವರ ಚಿನ್ನವನ್ನೇ ಹರಾಜಾಗಿಡಲು ಮುಂದಾಗಿದೆಯಂತೆ.

ಇನ್ನು ಫೈನಾನ್ಸ್​'ನವರು ಚಿನ್ನ ಹರಾಜು ಮಾಡಲು ಮುಂದಾಗಿದ್ದಾರೆ ಎಂಬ ವಿಚಾರ ತಿಳಿದು ಫೈನಾನ್ಸ್'ಗೆ ಆಗಮಿಸಿದ ಗ್ರಾಹಕರಿಗೆ ಫೈನಾನ್ಸ್ ಸಿಬ್ಬಂದಿ ಬೆದರಿಕೆ ಹಾಕಲು ಮುಂದಾಗಿದ್ದಾರೆ. ಜೊತೆಗೆ ಹೆಡ್​ ಆಫೀಸ್​ ಆದೇಶವಿದೆ. ಹಾಗಾಗಿ ನಾವು ಚಿನ್ನ ಹರಾಜು ಮಾಡುತ್ತೇವೆ ಎಂದಿದ್ದಾರೆ.

ಒಟ್ಟಿನಲ್ಲಿ ಅಡವಿಟ್ಟ ಚಿನ್ನಕ್ಕೆ ಬಡ್ಡಿ ಕಟ್ಟಿದ್ದರೂ ಐಐಎಫ್'ಎಲ್ ಫೈನಾನ್ಸ್ ಕಂಪನಿ ಅಂಧಾ ಕಾನೂನು ಪ್ರಕಾರ ಚಿನ್ನ ಹರಾಜಿಗೆ ಮುಂದಾಗಿದೆ. ಅಡವಿಟ್ಟ ಚಿನ್ನ ಹೇಗೆ ಪಡೆಯಬೇಕು ಎಂಬುವುದೇ ಈಗ ಗ್ರಾಹಕರಿಗೆ ಯಕ್ಷಪ್ರಶ್ನೆಯಾಗಿದೆ.