ವ್ಯಕ್ತಿಯೊಬ್ಬ ತನ್ನ ಖಾತೆಗೆ 500 ಹಾಗೂ 1000 ರೂಪಾಯಿಯ ಹಳೆ ನೋಟುಗಳನ್ನು ಬಳಸಿ ವ್ಯಕ್ತಿಯೊಬ್ಬ ತನ್ನ ಅಕೌಂಟ್'ಗೆ 2.50 ಲಕ್ಷ ಮೊತ್ತವನ್ನು ಜಮಾ ಮಾಡಲು ಸರ್ಕಾರ ಪರವಾನಿಗೆ ನೀಡಿತ್ತು. ಹೀಗಾಗಿ ಇಷ್ಟು ಮೊತ್ತವನ್ನು ಜಮಾ ಮಾಡಿದರೆ ಸರ್ಕಾರ ಯಾವುದೇ ವಿಚಾರಣೆ ಮಾಡಲಾರದು ಎಂಬುವುದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ಇದೀಗ ಸರ್ಕಾರ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ್ದು, ನೋಟ್ ಬ್ಯಾನ್ ಬಳಿಕ ಹಳೆ ನೋಟುಗಳಿಂದ 2 ಲಕ್ಷದಷ್ಟು ಮೊತ್ತ ನಿಮ್ಮ ಅಕಕೌಂಟ್'ಗೆ ಜಮೆಯಾಗಿದ್ದರೆ ನೀವು ವಿಚಾರಣೆಯನ್ನೆದುರಿಸಬೇಕಾಗುತ್ತದೆ. ವಾಸ್ತವವಾಗಿ ನೋಟ್ ಬ್ಯಾನ್ ಬಳಿಕ ತಮ್ಮಲ್ಲಿದ್ದ ಕಪ್ಪು ಹಣವನ್ನು ಬ್ಯಾಂಕ್'ಗಳಲ್ಲಿ ಜಮಾ ಮಾಡಲು 'ದೊಡ್ಡವರು' ತಪ್ಪು ದಾರಿ ಹಿಡಿದಿದ್ದರು. ಇದು ಸರ್ಕಾರದ ಗಮನಕ್ಕೆ ಬಂದಿದ್ದು, ಈ ಕಳ್ಳಾಟವನ್ನು ಬಯಲು ಮಾಡಲೆಂದೇ ಇಂತಹ ನಿರ್ಧಾರ ಕೈಗೊಂಡಿದ್ದಾರೆ.
ನವದೆಹಲಿ(ಡಿ.17): ನೋಟ್ ಬ್ಯಾನ್ ಜಾರಿಗೊಳಿಸಿದ ಬಳಿಕ ತಮ್ಮ ಅಕೌಂಟ್'ಗೆ ಅಮಾನ್ಯಗೊಳಿಸಿರುವ ಹಳೆಯ 500 ಹಾಗೂ 1000 ರೂ. ನೋಟುಗಳನ್ನೊಳಗೊಂಡ 2 ಲಕ್ಷ ಮೊತ್ತವನ್ನು ಜಮಾ ಮಾಡಿದರವರು ಆದಾಯ ತೆರಿಗೆ ಇಲಾಖೆ ನಡೆಸುವ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಈ ವೇಳೆ ಹಣದ ವಿಚಾರವಾಗಿ ಸೂಕ್ತ ಮಾಹಿತಿ ನೀಡಲು ತಪ್ಪಿದಲ್ಲಿ ಜೈಲು ಪಾಲಾಗುವ ಸಾಧ್ಯತೆಗಳೂ ಇವೆ.
ವ್ಯಕ್ತಿಯೊಬ್ಬ ತನ್ನ ಖಾತೆಗೆ 500 ಹಾಗೂ 1000 ರೂಪಾಯಿಯ ಹಳೆ ನೋಟುಗಳನ್ನು ಬಳಸಿ ವ್ಯಕ್ತಿಯೊಬ್ಬ ತನ್ನ ಅಕೌಂಟ್'ಗೆ 2.50 ಲಕ್ಷ ಮೊತ್ತವನ್ನು ಜಮಾ ಮಾಡಲು ಸರ್ಕಾರ ಪರವಾನಿಗೆ ನೀಡಿತ್ತು. ಹೀಗಾಗಿ ಇಷ್ಟು ಮೊತ್ತವನ್ನು ಜಮಾ ಮಾಡಿದರೆ ಸರ್ಕಾರ ಯಾವುದೇ ವಿಚಾರಣೆ ಮಾಡಲಾರದು ಎಂಬುವುದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ಇದೀಗ ಸರ್ಕಾರ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ್ದು, ನೋಟ್ ಬ್ಯಾನ್ ಬಳಿಕ ಹಳೆ ನೋಟುಗಳಿಂದ 2 ಲಕ್ಷದಷ್ಟು ಮೊತ್ತ ನಿಮ್ಮ ಅಕಕೌಂಟ್'ಗೆ ಜಮೆಯಾಗಿದ್ದರೆ ನೀವು ವಿಚಾರಣೆಯನ್ನೆದುರಿಸಬೇಕಾಗುತ್ತದೆ. ವಾಸ್ತವವಾಗಿ ನೋಟ್ ಬ್ಯಾನ್ ಬಳಿಕ ತಮ್ಮಲ್ಲಿದ್ದ ಕಪ್ಪು ಹಣವನ್ನು ಬ್ಯಾಂಕ್'ಗಳಲ್ಲಿ ಜಮಾ ಮಾಡಲು 'ದೊಡ್ಡವರು' ತಪ್ಪು ದಾರಿ ಹಿಡಿದಿದ್ದರು. ಇದು ಸರ್ಕಾರದ ಗಮನಕ್ಕೆ ಬಂದಿದ್ದು, ಈ ಕಳ್ಳಾಟವನ್ನು ಬಯಲು ಮಾಡಲೆಂದೇ ಇಂತಹ ನಿರ್ಧಾರ ಕೈಗೊಂಡಿದ್ದಾರೆ.
ಇದರಿಂದ ಕಪ್ಪುಕುಳಗಳು ಜನಸಾಮಾನ್ಯರ ಖಾತೆಗಳನ್ನು ದುರುಪಯೋಗಪಡಿಸಿಕೊಂಡಿದ್ದರೆ ಇಲಾಖೆಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. RBI ಪರಿಶೀಲನೆ ನಡೆಸಿ ಇಂತಹ ಖಾತೆಗಳನ್ನು ಗುರುತಿಸಿ ಐಟಿ ಅಧಿಕಾರಿಗಳಿಗೆ ಸೂಚನೆ ರವಾನಿಸುತ್ತದೆ. ಬಳಿಕ ಐಟಿ ಅಧಿಕಾರಿಗಳು ಇಷ್ಟು ಮೊತ್ತದ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿದ್ದಾರೆ.
ಈಗಾಗಲೇ RBI ಎಲ್ಲಾ ಬ್ಯಾಂಕ್'ಗಳಿಗೂ ಇಂತಹ ಖಾತೆಗಳ ಮಾಹಿತಿ ನೀಡಲು ಸೂಚಿಸಿದೆ. ಜನಸಾಮಾನ್ಯರ ಬ್ಯಾಂಕ್ ಖಾತೆಗಳನ್ನು ಕಪ್ಪುಕುಳಗಳು ದುರುಪಯೋಗಪಡಿಸಬಾರದು ಹಾಗೂ ಖಾತೆಗಳನ್ನು ಕಪ್ಪುಹಣಕ್ಕಾಗಿ ಉಪಯೋಗಿಸಬಾರದು ಎಂದು RBI ಇಂತಹ ಮಹತ್ತರ ಹೆಜ್ಜೆ ಇಟ್ಟಿದೆ.