ಮುಳ್ಳಯ್ಯನಗಿರಿ ನೋಡಲು ಹೋದ ಯುವಕ ಯುವತಿಯೊಂದಿಗೆ ಇಬ್ಬರು ಪುಂಡರು ಅಸಭ್ಯವಾಗಿ ವರ್ತಿಸಿ ಗೂಸಾ ತಿಂದಿದ್ದಾರೆ.
ಚಿಕ್ಕಮಗಳೂರು(ಆ.08): ಮುಳ್ಳಯ್ಯನಗಿರಿ ನೋಡಲು ಹೋದ ಯುವಕ ಯುವತಿಯೊಂದಿಗೆ ಇಬ್ಬರು ಪುಂಡರು ಅಸಭ್ಯವಾಗಿ ವರ್ತಿಸಿ ಗೂಸಾ ತಿಂದಿದ್ದಾರೆ.
ಹಾಸನ ಮೂಲದ ಯುವಕ, ಯುವತಿ ಮುಳ್ಳಯ್ಯನಗಿರಿ ನೋಡಲು ಕಾರಿನಲ್ಲಿ ಆಗಮಿಸಿದ್ದರು. ಇವರನ್ನು ನೋಡಿದ್ದ ಇಬ್ಬರು ಪುಂಡರು ಅವರನ್ನು ಚುಡಾಯಿಸಿದ್ದಾರೆ. ಅಲ್ಲದೇ ಅಸಭ್ಯವಾಗಿ ವರ್ತಿಸಿ ಅಶ್ಲೀಲ ಕಾಮೆಂಟ್ ಮಾಡಿದ್ದಾರೆ. ಇದರಿಂದ ಬೇಸತ್ತ ಯುವಕ ಯುವತಿ ಚಿಕ್ಕಮಗಳೂರಿಗೆ ವಾಪಸ್ಸಾಗಿದ್ದಾರೆ. ಆದರೆ ಅಷ್ಟಕ್ಕೂ ಸುಮ್ಮನಿರದ ಪುಂಡರು ಬೈಕ್'ನಲ್ಲಿ ಈ ಯುವಕ ಯುವತಿಯನ್ನು ಫಾಲೋ ಮಾಡಿದ್ದಾರೆ. ಕೊನೆಗೆ ಬೇಸತ್ತ ಆ ಯುವಕ, ಯುವತಿ ಬಸವನಹಳ್ಳಿ ಬಳಿ ಕಾರು ನಿಲ್ಲಿಸಿ ಕಾರನ್ನು ಹಿಂಬಾಲಿಸುತ್ತಿದ್ದ ಪುಂಡರಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಪುಂಡರಿಗೆ ಥಳಿಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹಾಸನ ಮೂಲದವರಾದ ಈ ಯುವಕ ಯುವತಿ ಸೀತಾಳಯ್ಯನ ಗಿರಿ ಹಾಗೂ ಮುಳ್ಳಯನ ಗಿರಿಯ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಆಗಮಿಸಿದ್ದರು. ಈ ಘಟನೆ ನಿನ್ನೆ ನಡೆದಿದ್ದು ಪುಂಡರಿಗೆ ಥಳಿಸಿದ ದೃಶ್ಯ ಬಸವನಹಳ್ಳಿಯ ಮುಖ್ಯ ರಸ್ತೆಯಲ್ಲಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
