ಬೆಂಗಳೂರು (ನ.10): ರೂ.500 ಹಾಗೂ ರೂ.1000 ನೊಟುಗಳನ್ನು ಬದಲಾಯಿಸಲು ಜನರು ಬೆಳ್ಳಂಬೆಳ್ಳಗ್ಗೆ ಬ್ಯಾಂಕುಗಳ ಮುಂದೆ ಕ್ಯೂ ನಿಂತಿದ್ದಾರೆ.

ಬೆಂಗಳೂರಿನ ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಕಚೇರಿ ಸೇರಿದಂತೆ, ಎಲ್ಲಾ ಇತರ ಬ್ಯಾಂಕುಗಳು, ಏಟಿಎಮ್’ಗಳು ಹಾಗೂ ಅಂಚೆ ಕಚೇರಿ ಮುಂದೆ ಜನರು ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿದ್ದಾರೆ.

ಈ ಮಧ್ಯೆ ಬ್ಯಾಂಕ್ ಕೆಲಸದ ಅವಧಿಯನ್ನು ವಿಸ್ತರಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.

ಈಗ ಚಾಲ್ತಿಯಲ್ಲಿರುವ ರೂ.500 ಹಾಗೂ ರೂ.1000 ನೋಟುಗಳನ್ನು ಕೇಂದ್ರ ಸರ್ಕಾರವು ಮಂಗಳವಾರ ಮಧ್ಯರಾತ್ರಿಯಿಂದ ರದ್ದುಗೊಳಿಸಿದೆ.