2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯಾಗುವ ಆಕಾಂಕ್ಷೆ ಹಾಗೂ ಸಾಮರ್ಥ್ಯ ನನಗಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಪಟ್ನಾ (ಮೇ.15): 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯಾಗುವ ಆಕಾಂಕ್ಷೆ ಹಾಗೂ ಸಾಮರ್ಥ್ಯ ನನಗಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ಅಭ್ಯರ್ಥಿಯಾಗುವುದಕ್ಕೆ ಯಾರಿಗೆ ಅರ್ಹತೆ ಇದೆ ಜನ ನಿರ್ಧರಿಸುತ್ತಾರೋ ಅವರು ದೇಶದ ಪ್ರಧಾನಿಯಾಗುತ್ತಾರೆ. ನರೇಂದ್ರ ಮೋದಿಗೆ ಆ ಸಾಮರ್ಥ್ಯವಿದೆಯೆಂದು ಜನ ಮನಗಂಡಿದ್ದಾರೆ ಹಾಗಾಗಿ ಕಳೆದ ಬಾರಿಯ ಚುನಾವಣೆಯಲ್ಲಿ ಅವರು ಪ್ರಧಾನಿಯಾಗಿದ್ದಾರೆ. 5 ವರ್ಷಗಳ ಹಿಂದೆ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರು ಕೂಡಾ ಪ್ರಧಾನಿ ಹುದ್ದಯ ರೇಸ್ ನಲ್ಲಿರಲಿಲ್ಲವೆಂದು ನಿತೀಶ್ ಕುಮಾರ್ ಹೇಳಿದ್ಧಾರೆ.
ನೀವೂ ಪ್ರಧಾನಿ ಹುದ್ದೆಯ ಆಕಾಂಕ್ಷಿಯೇ ಎನ್ನುವ ಪ್ರಶ್ನೆಗೆ ನಾನು ಆಕಾಂಕ್ಷಿಯೂ ಅಲ್ಲ. ನನಗೆ ಸಾಮರ್ಥ್ಯವೂ ಇಲ್ಲವೆಂದು ವ್ಯಂಗ್ಯವಾಗಿ ಹೇಳಿದ್ದಾರೆ. ನನ್ನ ಹೆಸರನ್ನು ಅನಗತ್ಯವಾಗಿ ಹೇಳಲಾಗುತ್ತಿದೆ. ನಾನು ಪ್ರಧಾನಿ ಹುದ್ದೆಯ ರೇಸ್ ನಲ್ಲಿಲ್ಲವೆಂದು ನಿತೀಶ್ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ.
