ಇದರಲ್ಲಿ ಆತಂಕ ಪಡುವ ವಿಚಾರವಿಲ್ಲ. ಕಬ್ಬಿಣಾಂಶ ಕೊರತೆಯಿಂದ ಜನ ಬಳಲುತ್ತಿದ್ದು, ಸರ್ಕಾರವೇ ಇಂಥ ಉಪ್ಪನ್ನು ಪೂರೈಸುತ್ತಿದೆ ೆಂದು ಸಚಿವ ಖಾದರ್ ಹೇಳಿದ್ದಾರೆ.
ಬೆಳಗಾವಿ: ರಾಜ್ಯಾದ್ಯಂತ ಉಪ್ಪು ಹಲವು ಬಣ್ಣಕ್ಕೆ ತಿರುಗುವ ವಿಚಾರವಾಗಿ ಜನರಲ್ಲಿ ಆತಂಕ ಮೂಡಿದೆ. ಇದೇ ಕಾರಣಕ್ಕೆ ಸುವರ್ಣ ನ್ಯೂಸ್ ಜನರ ಆತಂಕ ದೂರ ಮಾಡಲು ಮುಂದಾಯ್ತು.
ನೇರವಾಗಿ ಆಹಾರ ಹಾಗೂ ನಾಗರೀಕ ಸರಬರಾಜು ಇಲಾಖೆ ಸಚಿವರನ್ನು ಈ ಬಗ್ಗೆ ಪ್ರಶ್ನಿಸಿದೆವು. ಬೆಳಗಾವಿಯಲ್ಲಿ ಈ ಬಗ್ಗೆ ಸಚಿವ ಯು.ಟಿ ಖಾದರ್ ಅವರನ್ನು ಸಂಪರ್ಕಿಸಿದಾಗ ಇದರಲ್ಲಿ ಆತಂಕ ಪಡುವ ವಿಚಾರವಿಲ್ಲ. ಕಬ್ಬಿಣಾಂಶ ಕೊರತೆಯಿಂದ ಜನ ಬಳಲುತ್ತಿದ್ದು, ಸರ್ಕಾರವೇ ಇಂಥ ಉಪ್ಪನ್ನು ಪೂರೈಸುತ್ತಿದೆ. ಅಲ್ಲದೇ ಉಪ್ಪು ಬಿಳಿ ಬಣ್ಣದಲ್ಲೇ ಇರಬೇಕು ಎಂದು ಎಲ್ಲಿಯೂ ಹೇಳಿಲ್ಲ. ಉಪ್ಪು ನೀಲಿ ಬಣ್ಣವಾಗುವ ಬಗ್ಗೆ ಜನರು ಆತಂಕ ಪಡಬೇಕಿಲ್ಲ ಎಂದರು.
