ರೈಲು ಹಳಿ ಮೇಲೆ ನಿಂತು ಸೆಲ್ಫೀ ತಗೆಸಿಕೊಳ್ಳುವ ಭರದಲ್ಲಿ ಹಿಂಬದಿಯಲ್ಲಿ ಬರುತ್ತಿದ್ದ ರೈಲನ್ನೂ ಗಮನಿಸದೆ ಮೂವರು ಯುವಕರು ಪ್ರಾಣ ಕಳೆದುಕೊಂಡ ಧಾರುಣ ಘಟನೆ ರಾಮನಗರದಲ್ಲಿ ನಡೆದಿದೆ.

ಬೆಂಗಳೂರು(ಅ.03): ರೈಲು ಹಳಿ ಮೇಲೆ ನಿಂತು ಸೆಲ್ಫೀ ತಗೆಸಿಕೊಳ್ಳುವ ಭರದಲ್ಲಿ ಹಿಂಬದಿಯಲ್ಲಿ ಬರುತ್ತಿದ್ದ ರೈಲನ್ನೂ ಗಮನಿಸದೆ ಮೂವರು ಯುವಕರು ಪ್ರಾಣ ಕಳೆದುಕೊಂಡ ಧಾರುಣ ಘಟನೆ ರಾಮನಗರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಮನಗರ ತಾಲೂಕು ಮಂಚನಾಯಕನಹಳ್ಳಿ ಬಳಿಯ ವಂಡರ್ ಲಾ ಗೇಟ್ ಸಮೀಪದ ರೈಲ್ವೆ ಅಂಡರ್‍ಪಾಸ್‍ನಲ್ಲಿ ರೈಲು ಹಳಿ ಮೇಲೆ ನಿಂತು ಮೂವರು ಮೊಬೈಲ್‍ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ರೈಲನ್ನು ಗಮನಿಸದಿರುವುದೇ ಇವರ ಪ್ರಾಣಕ್ಕೆ ಕುತ್ತಾಗಿದೆ. ಮೂವರ ಮೃತದೇಹಗಳು ಗುರುತು ಸಿಗಲಾರದಷ್ಟು ಛಿದ್ರ ಛಿದ್ರವಾಗಿವೆ. ಇನ್ನು ಸ್ಥಳದಲ್ಲಿ ಸಿಕ್ಕ ದಾಖಲೆಗಳಿಂದ ಮೃತರಲ್ಲಿ ಇಬ್ಬರು ಜಯನಗರದ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.

ಬಿಡದಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.