ಹಿಂದಿ ಟೀವಿ ಚಾನೆಲೊಂದರ ಕಾಮಿಡಿ ಕಾರ್ಯಕ್ರಮದಲ್ಲಿ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಂತೆಯೇ ಮಾತನಾಡಿ ತಮಾಷೆ ಮಾಡುವ ವಿಡಿಯೋ ಫೇಸ್‌'ಬುಕ್‌'ನಲ್ಲಿ ವೈರಲ್ ಆಗಿದೆ. ವಿಶೇಷ ಎಂದರೆ, ಯುವಕ ನೀಡಿದ ಆ ಕಾರ್ಯಕ್ರಮವನ್ನು ಟೀವಿ ಚಾನೆಲ್ ಪ್ರಸಾರವನ್ನೇ ಮಾಡಿಲ್ಲ. ಮೋದಿ ಕುರಿತು ಹಾಸ್ಯ ಮಾಡಲಾಗಿದೆ ಎಂಬುದು ಇದಕ್ಕೆ ಕಾರಣ!

ನವದೆಹಲಿ(ಅ.27): ಹಿಂದಿ ಟೀವಿ ಚಾನೆಲೊಂದರ ಕಾಮಿಡಿ ಕಾರ್ಯಕ್ರಮದಲ್ಲಿ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಂತೆಯೇ ಮಾತನಾಡಿ ತಮಾಷೆ ಮಾಡುವ ವಿಡಿಯೋ ಫೇಸ್‌'ಬುಕ್‌'ನಲ್ಲಿ ವೈರಲ್ ಆಗಿದೆ. ವಿಶೇಷ ಎಂದರೆ, ಯುವಕ ನೀಡಿದ ಆ ಕಾರ್ಯಕ್ರಮವನ್ನು ಟೀವಿ ಚಾನೆಲ್ ಪ್ರಸಾರವನ್ನೇ ಮಾಡಿಲ್ಲ. ಮೋದಿ ಕುರಿತು ಹಾಸ್ಯ ಮಾಡಲಾಗಿದೆ ಎಂಬುದು ಇದಕ್ಕೆ ಕಾರಣ!

ಮೋದಿ ಹಾಗೂ ರಾಹುಲ್‌'ರಂತಹ ರಾಜಕಾರಣಿಗಳ ಮಿಮಿಕ್ರಿ ಮಾಡುವುದರಲ್ಲಿ ಶ್ಯಾಮ್ ರಂಗೀಲಾ ಎಂಬ ಹಾಸ್ಯಗಾರ ನಿಷ್ಣಾತ. ಇದನ್ನು ಗಮನಿಸಿದ ಸ್ಟಾರ್ ಪ್ಲಸ್ ವಾಹಿನಿ ತನ್ನ 'ದ ಗ್ರೇಟ್ ಇಂಡಿಯನ್ ಲ್ಟಾರ್ ಚಾಲೆಂಜ್’ ಕಾರ್ಯಕ್ರಮಕ್ಕೆ ಆಹ್ವಾನ ನೀಡಿತ್ತು. ಆರಂಭದಲ್ಲಿ ಮೋದಿ ಬಗ್ಗೆ ಮಿಮಿಕ್ರಿ ಮಾಡಬೇಡಿ. ರಾಹುಲ್ ವಿಚಾರದಲ್ಲಿ ಅಭ್ಯಂತರವಿಲ್ಲ ಎಂದು ತಿಳಿಸಿತ್ತು.

ಶ್ಯಾಮ್ ರಂಗೀಲಾ ಅವರು ಮೋದಿ ಹಾಗೂ ರಾಹುಲ್‌ರಂತೆಯೇ ಮಾತನಾಡಿ ಒಂದು ತಿಂಗಳು ಶೂಟಿಂಗ್‌ನಲ್ಲಿ ಭಾಗಿಯಾಗಿ ಕಾರ್ಯಕ್ರಮ ನೀಡಿದ್ದರು. ಇದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ತೀರ್ಪುಗಾರರ ಮೆಚ್ಚುಗೆಗೂ ಪಾತ್ರವಾಗಿತ್ತು. ಶೂಟಿಂಗ್ ಮುಗಿದ ಬಳಿಕ ಟೀವಿ ವಾಹಿನಿಯವರು, ಮೋದಿ- ರಾಹುಲ್ ಕುರಿತು ಜೋಕ್ ಇಲ್ಲದ ಕಾರ್ಯಕ್ರಮ ರೂಪಿಸುವಂತೆ ಹೇಳಿ, ಐದು ದಿನ ಸಮಯ ನೀಡಿದರು. ಅತ್ಯುತ್ತಮ ಕಾರ್ಯಕ್ರಮ ನೀಡಲು ಆಗದ ಕಾರಣಕ್ಕೆ ನನ್ನನ್ನು ಶೋದಿಂದ ಹೊರ ಕಳಿಸಲಾಯಿತು ಎಂದು ರಂಗೀಲಾ ತಿಳಿಸಿದ್ದಾರೆ.