ಫೆಮರಾಲ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪೇಜಾವರ  ಶ್ರೀಗಳು ಕೆಎಂಸಿ ಆಸ್ಪತ್ರೆಯಿಂದ  ಡಿಸ್ಚಾರ್ಜ್ ಆಗಿದ್ದಾರೆ. ಶ್ರೀಕೃಷ್ಣ ಮಠಕ್ಕೆ ವಿಶ್ವೇಶತೀರ್ಥ ಶ್ರೀಪಾದರು ಆಗಮಿಸಿದ್ದಾರೆ.

ಉಡುಪಿ (ಅ.27): ಫೆಮರಾಲ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪೇಜಾವರ  ಶ್ರೀಗಳು ಕೆಎಂಸಿ ಆಸ್ಪತ್ರೆಯಿಂದ  ಡಿಸ್ಚಾರ್ಜ್ ಆಗಿದ್ದಾರೆ. ಶ್ರೀಕೃಷ್ಣ ಮಠಕ್ಕೆ ವಿಶ್ವೇಶತೀರ್ಥ ಶ್ರೀಪಾದರು ಆಗಮಿಸಿದ್ದಾರೆ.

ವೈದ್ಯರು ಚಿಕ್ಕದೊಂದು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.  ಈಗ ಯಾವ ನೋವು ಇಲ್ಲ.  ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ.  ಮೆಟ್ಟಿಲು ಹತ್ತಬಾರದು,  ಭಾರ ಎತ್ತಬಾರದು ಎಂದು ವೈದ್ಯರು  ತಾಕೀತು ಮಾಡಿದ್ದಾರೆ.  ಕೆಲ ದಿನಗಳ ಕಾಲ ಪೂಜೆ ಮಾಡಲು ಆಗಲ್ಲ.  ಉಳಿದಂತೆ ಎಲ್ಲಾ ಕಾರ್ಯಕ್ರಮದಲ್ಲಿಯೂ  ಭಾಗಿಯಾಗುತ್ತೇನೆ ಎಂದು ಪೇಜಾವರ ಶ್ರೀ ಹೇಳಿದ್ದಾರೆ.