ಉಡುಪಿ ಶ್ರೀಕೃಷ್ಣ ಮಠದಲ್ಲಿ ಆಷಾಢದ ಪ್ರಥಮ ಏಕಾದಶಿಯ ಪ್ರಯುಕ್ತ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಬುಧವಾರ ಹರಿವಾಣದಲ್ಲಿ ತುಳಸಿಮಾಲೆಯನ್ನು ತಲೆಯ ಮೇಲೆ ಹೊತ್ತು ‘ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರೂ...’ ಎಂಬ ದಾಸರ ಪದಕ್ಕೆ ನೃತ್ಯ ಮಾಡಿದರು. 

ಉಡುಪಿ (ಜು.05): ಉಡುಪಿ ಶ್ರೀಕೃಷ್ಣ ಮಠದಲ್ಲಿ ಆಷಾಢದ ಪ್ರಥಮ ಏಕಾದಶಿಯ ಪ್ರಯುಕ್ತ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಬುಧವಾರ ಹರಿವಾಣದಲ್ಲಿ ತುಳಸಿಮಾಲೆಯನ್ನು ತಲೆಯ ಮೇಲೆ ಹೊತ್ತು ‘ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರೂ...’ ಎಂಬ ದಾಸರ ಪದಕ್ಕೆ ನೃತ್ಯ ಮಾಡಿದರು. 
ಪ್ರತಿದಿನ ಕೃಷ್ಣ ದೇವರಿಗೆ ರಾತ್ರಿ ಪೂಜೆ ಆದ ನಂತರ ಸೂರ್ಯ ವಾದ್ಯ, ನಾದಸ್ವರ, ಸಂಕೀರ್ತನೆ, ಸಂಗೀತ, ಭಾಗವತ ಪುರಾಣಗಳನ್ನು ಚಂದ್ರಶಾಲೆಯಲ್ಲಿ ನಡೆಸಿದ ನಂತರ, ಎದುರಿನ ಮಂಟಪದಲ್ಲಿ ಸ್ವಾಮೀಜಿಯವರು ದೇವರಿಗೆ ಮಂಗಳಾರತಿ ಮಾಡಿ ತುಳಸಿ ಹರಿವಾಣವನ್ನು ತಲೆಯಲಿಟ್ಟು ನೃತ್ಯ ನಡೆಸಿ ಪ್ರದಕ್ಷಿಣೆ ಮಾಡುತ್ತಾರೆ. ಈ ಸೇವೆಯು ಆಷಾಡ ಮಾಸದ ಶುಕ್ಲ ಏಕಾದಶಿಯಿಂದ ಕಾರ್ತಿಕ ಮಾಸದ ಶುಕ್ಲ ಏಕಾದಶಿಯವರೆಗೆ ಚಾತುರ್ಮಾಸದ 8 ಏಕಾದಶಿಗಳವರೆಗೂ ನಡೆಯುತ್ತದೆ. ಇದನ್ನು ಹರಿವಾಣ ನರ್ತನ ಎಂದು ಕರೆಯುತ್ತಾರೆ.