ಖ್ಯಾತ ಜ್ಯೋತಿಷಿ ಆನಂದ ಗುರೂಜಿ ಮನೆ ಮೇಲೆ ನಿನ್ನೆ ರಾತ್ರಿ ಕೆಲ‌ ದುಷ್ಕರ್ಮಿಗಳು ಬಿಯರ್ ಬಾಟಲ್ ಮತ್ತು ಮಾಂಸದ ತುಂಡುಗಳನ್ನ ಎಸೆದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು(ಸೆ.16): ಖ್ಯಾತ ಜ್ಯೋತಿಷಿ ಆನಂದ ಗುರೂಜಿ ಮನೆ ಮೇಲೆ ನಿನ್ನೆ ರಾತ್ರಿ ಕೆಲ ದುಷ್ಕರ್ಮಿಗಳು ಬಿಯರ್ ಬಾಟಲ್ ಮತ್ತು ಮಾಂಸದ ತುಂಡುಗಳನ್ನ ಎಸೆದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ನಿನ್ನೆ ರಾತ್ರಿ ೧೧ ಗಂಟೆ ಸುಮಾರಿಗೆ ಬೈಕ್'ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ವೆಸಗಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಕೃತ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು , ಸ್ಥಳಕ್ಕೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆನಂದ ಗುರೂಜಿ ಖಾಸಗಿ ಕಾರ್ಯಕ್ರಮದಲ್ಲಿ ಗೋ ಹತ್ಯೆ ಬಗ್ಗೆ ಪ್ರವಚನ ನೀಡಿದ್ದ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
