ಪೇಟಿಎಂನ ರಹಸ್ಯ ಮಾಹಿತಿ ಕದ್ದು, ಅದನ್ನು ಬಹಿರಂಗ ಮಾಡದೇ ಇರುವುದಕ್ಕೆ ಕಂಪನಿ ಮಾಲೀಕರಿಂದಲೇ 20 ಕೋಟಿ ರು. ಹಣ ಸುಲಿಗೆಗೆ ಯತ್ನಿಸಿದ ಮೂವರನ್ನು ಬಂಧಿಸಲಾಗಿದೆ.

ನೋಯ್ಡಾ: ಇ ವ್ಯಾಲೆಟ್ ಸೇವೆ ಒದಗಿಸುವ ಪೇಟಿಎಂನ ರಹಸ್ಯ ಮಾಹಿತಿ ಕದ್ದು, ಅದನ್ನು ಬಹಿರಂಗ ಮಾಡದೇ ಇರುವುದಕ್ಕೆ ಕಂಪನಿ ಮಾಲೀಕರಿಂದಲೇ 20 ಕೋಟಿ ರು. ಹಣ ಸುಲಿಗೆಗೆ ಯತ್ನಿಸಿದ ಪೇಟಿಎಂನ ಮೂವರನ್ನು ಸೋಮವಾರ ಬಂಧಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೇಟಿಎಂನ ಸಂಸ್ಥಾಪಕ ವಿಜಯ ಶೇಖರ್ ಶರ್ಮಾರ ಕಾರ್ಯದರ್ಶಿಯಾಗಿದ್ದ ಮಹಿಳೆ ಮತ್ತು ಇತರೆ ಇಬ್ಬರು, ಇತ್ತೀಚೆಗೆ ಪೇಟಿಎಂನ ವೈಯಕ್ತಿಕ ಮಾಹಿತಿ ಮತ್ತು ರಹಸ್ಯ ಮಾಹಿತಿಗಳನ್ನು ಕಳವು ಮಾಡಿದ್ದರು. 

ಬಳಿಕ ಶರ್ಮಾಗೆ ಕರೆ ಮಾಡಿದ್ದ ಮೂವರು, ಈ ಮಾಹಿತಿ ಬಯಲು ಮಾಡದೇ ಇರಲು 20 ಕೋಟಿಗೆ ಬೇಡಿಕೆ ಇಟ್ಟಿದ್ದರು.