ರಾಯ್‌ಪುರದಲ್ಲಿ ಪ್ರೇಯಸಿ ಹಾಗೂ ಆಕೆಯ ಸ್ನೇಹಿತನ ಜೊತೆಗಿನ ಪ್ರೇಮ ವಿವಾದದ ಜಗಳದ ನಂತರ, 34 ವರ್ಷದ ಪರಂಪ್ರೀತ್ ಸಿಂಗ್ ಎಂಬ ಯುವಕನ ಮೇಲೆ ಕಾರು ಹರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಇಬ್ಬರನ್ನು ತಡೆಯಲು ಪರಂಪ್ರೀತ್ ಚಲಿಸುತ್ತಿದ್ದ ಕಾರಿನ ಛಾವಣಿ ಮೇಲೇರಿದ್ದರು, ಆದರೆ ಅವರು ಕೆಳಗೆ ಬಿದ್ದಾಗ ಆರೋಪಿಗಳು ಅವರ ಮೇಲೆಯೇ ಕಾರು ಚಲಾಯಿಸಿ ಪರಾರಿಯಾಗಿದ್ದಾರೆ.
- Home
- News
- India News
- National News Live: ಗೆಳತಿಯ ತಡೆಯಲು ಕಾರಿನ ರೂಫ್ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ
National News Live: ಗೆಳತಿಯ ತಡೆಯಲು ಕಾರಿನ ರೂಫ್ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ

ನವದೆಹಲಿ (ಆ.15): ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 80ನೇ ವರ್ಷದ ದಿನಾಚರಣೆಯನ್ನು ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ.ದೆಹಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಸತತ 13ನೇ ಸಲ ಧ್ವಜಾರೋಹಣ ಮಾಡಿದ್ದಾರೆ. ಅದರೊಂದಿಗೆ ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿಗೆ ವಂದೇ ಮಾತರಂ ಗೀತೆಯನ್ನು ಗಾಯನ ಮಾಡಲಾಗುತ್ತದೆ. ಸ್ವಚ್ಛತಾ ಕಾರ್ಮಿಕರು ಸೇರಿ 5 ಸಾವಿರ ಮಂದಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಇದೇ ವೇಳೆ ಮೋದಿ ಜೆನ್ಝೀ ಹೋರಾಟದ ಬಗ್ಗೆ ತಮ್ಮ ಭಾಷಣದಲ್ಲಿ ಮಾತನಾಡುತ್ತಾರೆಯೇ ಎನ್ನುವ ಕುತೂಹಲವೂ ವ್ಯಕ್ತವಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅದ್ದೂರಿಯಾಗಿ ಸ್ವಾತಂತ್ರ್ಯೋತ್ಸವದ ಆಚರಣೆ ಮಾಡಲಾಗುತ್ತಿದ್ದು, ಬೆಂಗಳೂರಿನ ವಿಧಾನಸೌಧದ ಎದುರು ಇದೇ ಮೊದಲ ಬಾರಿಗೆ ಫ್ರೀಡಮ್ ಹಬ್ಬದ ಆಚರಣೆ ನಡೆಯಲಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 15th August: ಗೆಳತಿಯ ತಡೆಯಲು ಕಾರಿನ ರೂಫ್ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ
India News Live 15th August: ಮಲಗಿದ್ದ ಹಿಮ ಕರಡಿಯನ್ನು ಹಾರ್ನ್ ಹಾಕಿ ಎಬ್ಬಿಸಿದ, ವನ್ಯಜೀವಿ ಶಾಪಕ್ಕೆ ಸಿಬ್ಬಂದಿಗೆ ನಿದ್ದೆ ಇಲ್ಲದಾಯಿತು
ಹಿಮ ಕರಡಿ ತನ್ನ ಪಾಡಿಗೆ ಗಾಢ ನಿದ್ದೆಯಲ್ಲಿತ್ತು. ನಿದ್ದೆಯಲ್ಲಿದ್ದ ಹಿಮ ಕರಡಿಯನ್ನು ಉದ್ದೇಶಪೂರ್ವಕವಾಗಿ ಹಡಗಿನ ಹಾರ್ನ್ ಹಾಕಿ ಸಿಬ್ಬಂದಿ ಎಬ್ಬಿಸಿದ್ದ. ಆತಂಕದಿಂದಲೇ ಎದ್ದ ಹಿಮ ಕರಡಿ ನೀಡಿದ ಶಾಪ ಕ್ಯಾಪ್ಟನ್‌ಗೆ ತಟ್ಟಿದೆ.
India News Live 15th August: ತೆಲುಗು ಓದಲು ಬರಲ್ಲ.. ಆದರೂ ಡೈಲಾಗ್ ಹೇಳುವುದರಲ್ಲಿ ಎಕ್ಸ್‌ಪರ್ಟ್ - ಮಹೇಶ್ ಬಾಬು ಸೀಕ್ರೆಟ್ ರಿವೀಲ್!
ಸೂಪರ್‌ಸ್ಟಾರ್ ಕೃಷ್ಣ ಅವರ ಪುತ್ರನಾಗಿ ಚಿತ್ರರಂಗಕ್ಕೆ ಬಂದ ಮಹೇಶ್ ಬಾಬು, ತನ್ನ ತಂದೆಯಿಂದ ಒಂದು ವಿಶೇಷ ಅಭ್ಯಾಸವನ್ನು ಬಳುವಳಿಯಾಗಿ ಪಡೆದಿದ್ದಾರೆ. ಆ ಅಭ್ಯಾಸವೇ ಅವರ ವೃತ್ತಿಜೀವನವನ್ನು ಉತ್ತುಂಗಕ್ಕೇರಿಸಿತೇ? ಏನಿದು ಸ್ವಾರಸ್ಯಕರ ವಿಷಯ?
India News Live 15th August: ‘ಮರ್ಡರ್’ ಮೂಲಕ ಖ್ಯಾತಿ ಪಡೆದ ನಟಿ ಮಲ್ಲಿಕಾ ಶೆರಾವತ್ - ಅವರ ನಿಜವಾದ ಹೆಸರು ಇದೇನಾ!
Mallika Sherawat: ಹಿಂದಿ ಸಿನಿಮಾರಂಗದಲ್ಲಿ ನಟ-ನಟಿಯರು ಹೆಸರು ಬದಲಿಸಿಕೊಳ್ಳುವುದು ಹೊಸದೇನಲ್ಲ. ಇದೇ ಹಾದಿಯಲ್ಲಿ ಬಂದವರು ನಟಿ ಮಲ್ಲಿಕಾ ಶೆರಾವತ್. ಆ ಹೆಸರು ಬದಲಾಗಿದ್ದೇ ಒಂದು ದೊಡ್ಡ ಕಥೆ.
India News Live 15th August: ಆ ವಿಶೇಷ ಸ್ಥಾನಮಾನ ತೆಗೆಯದೇ ಇದ್ದಿದ್ದರೆ, POK ಜನ ಭಾರತಕ್ಕೆ ಸೇರಲು ಹೋರಾಡುತ್ತಿದ್ದರು! ಓಮರ್ ಅಬ್ದುಲ್ಲಾ ಹೇಳಿಕೆ ಸಂಚಲನ
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡದೇ ಇದ್ದಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರದ (POK) ಜನರು ಭಾರತ ಸೇರಲು ಹೋರಾಡುತ್ತಿದ್ದರು ಎಂದು ಮಾಜಿ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ತರಲು ಸರ್ಕಾರ ಬದ್ಧವಾಗಿದೆ ಎಂದರು.
India News Live 15th August: ‘ತಲ’ ಅಜಿತ್‌ಗೆ ಏನಾಯ್ತು? ಬರೋಬ್ಬರಿ 42 ಕೆಜಿ ತೂಕ ಇಳಿಸಿಕೊಂಡಿದ್ದೇಕೆ? ಅಭಿಮಾನಿಗಳಿಗೆ ಶಾಕ್!
ಕಾಲಿವುಡ್‌ನ ಬಹುಜನಪ್ರಿಯ ನಟ ಅಜಿತ್ ಕುಮಾರ್ ಅವರು 8 ತಿಂಗಳ ಅವಧಿಯಲ್ಲಿ ಬರೋಬ್ಬರಿ 42 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ. ಕಾರ್ ರೇಸಿಂಗ್‌ನಲ್ಲಿ ಭಾಗವಹಿಸಲು ಉತ್ತಮ ಫಿಟ್‌ನೆಸ್ ಅಗತ್ಯವಿತ್ತು.
India News Live 15th August: ರಿಲಯನ್ಸ್ ರಿಟೇಲ್ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ವಿಭಾಗದ ಸಿಒಒ ಆಗಿ ವಿನೀತ್ ಜೈನ್ ನೇಮಕ, ಈ ಹಿಂದೆ ಎಲ್ಲಿದ್ರು?
India News Live 15th August: ಭಾರತೀಯ ಮಾರ್ಕೆಟ್‌ಗೆ Gen Z ಜನಾಂಗ ಎಷ್ಟು ದೊಡ್ಡ ಆಸ್ತಿ? ಅವರು ಶಾಪಿಂಗ್ ಮಾಡೋದು ಹೇಗೆ ಗೊತ್ತಾ?
ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 27 ರಷ್ಟಿರುವ ಜೆನ್ ಜಿ (Gen Z) ಜನಾಂಗವು ದೇಶದ ಒಟ್ಟು ಬಳಕೆಯಲ್ಲಿ ಶೇಕಡಾ 43 ರಷ್ಟು ಪಾಲನ್ನು ಹೊಂದುವ ಮೂಲಕ ಇಂದಿನ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಸಂಪೂರ್ಣವಾಗಿ ಡಿಜಿಟಲ್ ಜಗತ್ತಿಗೆ ಒಗ್ಗಿಕೊಂಡಿರುವ ಈ ಯುವ ಪೀಳಿಗೆಯು ಬ್ರ್ಯಾಂಡ್ ನಿಷ್ಠೆಗಿಂತ ಹೆಚ್ಚಾಗಿ ಆನ್‌ಲೈನ್ ಟ್ರೆಂಡ್‌ಗಳು ಹಾಗೂ ನಂಬಿಕೆಗೆ ಹೆಚ್ಚಿನ ಆದ್ಯತೆ ನೀಡಿ ಮಾರುಕಟ್ಟೆಯ ದಿಕ್ಕನ್ನು ಬದಲಾಯಿಸುತ್ತಿದೆ.
India News Live 15th August: ಸಾಲ ಕಟ್ಟಲಾಗದಿದ್ದರೆ ಫೋನ್ ಲಾಕ್ ಆಗುತ್ತಾ? ಆರ್‌ಬಿಐನ ಕಟ್ಟುನಿಟ್ಟಿನ ನಿಯಮಗಳ ಮಾಹಿತಿ ಇಲ್ಲಿದೆ
India News Live 15th August: ಆರು ಮೂಸ್‌ಗಳು ಬದಲಿಸಿದ ದ್ವೀಪದ ಹಣೆಬರಹ, ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ಬೋರಿಯಲ್ ಕಾಡುಗಳು ನಾಶದತ್ತ!
ನ್ಯೂಫೌಂಡ್‌ಲ್ಯಾಂಡ್‌ಗೆ ಪರಿಚಯಿಸಲಾದ ಕೆಲವೇ ಮೂಸ್‌ಗಳು, ನೈಸರ್ಗಿಕ ಶತ್ರುಗಳ ಅನುಪಸ್ಥಿತಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬೆಳೆದು ದ್ವೀಪದ ಅರಣ್ಯಗಳಿಗೆ ಕಂಟಕವಾದವು. ಈ ಪರಿಸರ ಅಸಮತೋಲನವನ್ನು ನಿಯಂತ್ರಿಸಲು ಮತ್ತು ಕಾಡುಗಳನ್ನು ರಕ್ಷಿಸಲು, ಇಂದು ಬೇಟೆಯನ್ನು ಒಂದು ಪ್ರಮುಖ ನಿರ್ವಹಣಾ ಸಾಧನವಾಗಿ ಬಳಸಲಾಗುತ್ತಿದೆ. ಪ್ರಸ್ತುತ, ಅರಣ್ಯ ರಕ್ಷಿಸಲು ಬೇಟೆ ಮೂಲಕ ಅವುಗಳ ಸಂಖ್ಯೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದೆ.
India News Live 15th August: Trisha Marriage - 2015ರಲ್ಲಿ ತ್ರಿಶಾ ಮದುವೆ ನಿಂತು ಹೋಗಿದ್ದು ಏಕೆ? ಬಯಲಾಯ್ತು ಶಾಕಿಂಗ್ ರಹಸ್ಯ
2015ರಲ್ಲಿ ತ್ರಿಶಾ ತಾವು ಉದ್ಯಮಿಯೊಬ್ಬರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ರಿವೀಲ್ ಮಾಡಿದ್ದರು. ಕೆಲವೇ ದಿನಗಳಲ್ಲಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಆ ಬಳಿಕ ಈ ಬಗ್ಗೆ ಮಾತನಾಡಿದ್ದ ತ್ರಿಶಾ, ಅಸಲಿ ಕಾರಣವನ್ನು ರಿವೀಲ್ ಮಾಡಿದ್ದರು.
India News Live 15th August: ಟೀಂ ಇಂಡಿಯಾಗೆ ಮೊದಲ ದಿನವೇ ಆಘಾತ.. ಕೆಎಲ್ ರಾಹುಲ್‌ಗೆ ಗಾಯ, ತಂಡದಲ್ಲಿ ಭಾರೀ ಆತಂಕ
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಭಾರತದ ಬ್ಯಾಟರ್ ಕೆ ಎಲ್ ರಾಹುಲ್ ಅಜೇಯ 77 ರನ್ ಗಳಿಸಿದ್ದಾಗ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಗಾಯಗೊಂಡು ಹೊರನಡೆದಿದ್ದಾರೆ. ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ದೇವದತ್ ಪಡಿಕ್ಕಲ್ ಅಜೇಯ 131 ರನ್ ಗಳಿಸಿದ್ದು, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಟೆಸ್ಟ್ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಇತಿಹಾಸ ಬರೆದಿದ್ದಾರೆ.
India News Live 15th August: ಸ್ವಾತಂತ್ರ್ಯ ದಿನಾಚರಣೆ ವೇಳೆ ರಾತ್ರೋರಾತ್ರಿ ವೈರಲ್ ಆದ ಪುಟಾಣಿ.. ವಿಡಿಯೋದಲ್ಲಿ ಅಂಥದ್ದೇನಿದೆ?
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸೇನಾ ಸಮವಸ್ತ್ರ ಧರಿಸಿರುವ ಪುಟಾಣಿ ಬಾಲಕಿಯ ಅತ್ಯಂತ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
India News Live 15th August: ಈ ಜಾಬ್ ಮಾಡ್ತಿದ್ದೀರಾ? ಕೂಡಲೇ ಚೇಂಜ್ ಮಾಡಿ, ಇಲ್ಲ ಎಂದರೆ ಬೀದಿಗೆ ಬೀಳ್ತೀರಾ! ಖ್ಯಾತ CEO ವಾರ್ನಿಂಗ್
ಪಾಲೊ ಆಲ್ಟೊ ನೆಟ್‌ವರ್ಕ್ ಸಿಇಒ ನಿಕೇಶ್ ಅರೋರಾ ಅವರ ಪ್ರಕಾರ, ಎಐ ತಂತ್ರಜ್ಞಾನದಿಂದಾಗಿ ಮುಂದಿನ ಮೂರು ವರ್ಷಗಳಲ್ಲಿ ಕಾರ್ಪೊರೇಟ್ ಉದ್ಯೋಗಗಳಲ್ಲಿ ಭಾರೀ ಬದಲಾವಣೆಯಾಗಲಿದೆ. ಕಾಲಕ್ಕೆ ತಕ್ಕಂತೆ ಉದ್ಯೋಗಿಗಳು ಎಐ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ.
India News Live 15th August: ಮೃತ ಮಗನ ರೂಮ್ ಕ್ಲೀನ್ ಮಾಡುವಾಗ ಅಲ್ಲಿದ್ದ ವಸ್ತು ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಮ್ಮ
India News Live 15th August: ಯಾವಾಗ್ಲೂ ಆಂಟಿ, ಅಮ್ಮ, ಅಜ್ಜಿಯ ಪಾತ್ರಗಳನ್ನೇ ಮಾಡಲು ಆಗಲ್ಲ - 59 ವರ್ಷದ ಖ್ಯಾತ ನಟಿ
ಖ್ಯಾತ ನಟಿಯೊಬ್ಬರು ವಯಸ್ಸಾದಂತೆ ಸಿಗುವ ಪಾತ್ರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟಿಯರ ವಯಸ್ಸು 30 ದಾಟುತ್ತಿದ್ದಂತೆ ಅವರನ್ನು ಅಜ್ಜಿ ಪಾತ್ರಗಳಿಗೆ ಸೀಮಿತಗೊಳಿಸಲಾಗುತ್ತದೆ ಮತ್ತು ಬಾಲಿವುಡ್ ಒಂದು ನಕಲಿ ಉದ್ಯಮ ಎಂದು ಅವರು ಟೀಕಿಸಿದ್ದಾರೆ.
India News Live 15th August: ಚೊಚ್ಚಲ ಟೆಸ್ಟ್ ಶತಕ ಚಚ್ಚಿದ ದೇವದತ್ ಪಡಿಕ್ಕಲ್; ಗಾಲೆ ಟೆಸ್ಟ್‌ನಲ್ಲಿ ಕನ್ನಡಿಗರದ್ದೇ ದರ್ಬಾರ್..!
India News Live 15th August: ಯೂಟ್ಯೂಬ್ ವಿಡಿಯೋ ರೆಕಾರ್ಡಿಂಗ್ ನಡೀತಿತ್ತು.. ಅಶ್ವಿನ್ ಮನೆಗೆ ದಿಢೀರ್ ಪೊಲೀಸರು ಎಂಟ್ರಿ! ಅಶ್ವಿನ್ ಪತ್ನಿ ಗಾಬರಿ
ರವಿಚಂದ್ರನ್ ಅಶ್ವಿನ್ ಅವರು ತಮ್ಮ ಯೂಟ್ಯೂಬ್ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಅವರ ಮನೆಗೆ ದಿಢೀರನೆ ಪೊಲೀಸರು ಆಗಮಿಸಿದ್ದರು. ಇದು ಯಾವುದೇ ಕಾನೂನು ಸಮಸ್ಯೆಯಾಗಿರದೆ ಕೇವಲ ವೀಸಾ ಮತ್ತು ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಸಾಮಾನ್ಯ ಪೊಲೀಸ್ ವೆರಿಫಿಕೇಶನ್ ಪ್ರಕ್ರಿಯೆಯಾಗಿತ್ತು ಎಂದು ತಿಳಿದುಬಂದಿದೆ.
India News Live 15th August: MS Dhoni, ಸುರೇಶ್ ರೈನಾ ಆಗಸ್ಟ್ 15ರಂದೇ ಒಟ್ಟಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದೇಕೆ? ಕೊನೆಗೂ ಆ ಸೀಕ್ರೆಟ್ ಬಯಲು..!
2020ರ ಆಗಸ್ಟ್ 15 ರಂದು ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಒಟ್ಟಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ತಮ್ಮ ಜೆರ್ಸಿ ಸಂಖ್ಯೆ 7 ಮತ್ತು 3 ಸೇರಿ 73 ಆಗುವುದರಿಂದ, ಭಾರತದ 73ನೇ ಸ್ವಾತಂತ್ರ್ಯ ದಿನದಂದೇ ವಿದಾಯ ಹೇಳಲು ನಿರ್ಧರಿಸಿದ್ದೆವು ಎಂದು ರೈನಾ ಈ ನಿರ್ಧಾರದ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
India News Live 15th August: ಗುಂಡು ತಾಗಿದರೂ ಉಗ್ರರ ಸುಳಿವು ನೀಡಿದ ಭಾರತೀಯ ಸೇನೆಯ ಟೈಸನ್‌ಗೆ ಮೆನ್ಶನ್ ಇನ್ ಡಿಸ್ಪಾಚಸ್ ಗೌರವ
ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಭಾರತೀಯ ಸೇನೆಯ ಕಮಾಂಡೋ ಡಾಗ್ ಟೈಸನ್‌ಗೆ ಗೌರವ ಪದಕ ನೀಡಲಾಗಿದೆ. ಕಾಶ್ಮೀರದಲ್ಲಿ ಉಗ್ರರ ವಿರುದ್ದ ನಡೆದ ಕಾರ್ಯಾಚರಣೆಯಲ್ಲಿ ಉಗ್ರರ ಗುಂಡು ತಾಗಿದರೂ ಭಾರತೀಯ ಸೇನೆಗೆ ಮಹತ್ವದ ಸುಳಿವು ನೀಡಿದ ಟೈಸನ್‌ಗೆ ಸೇನಾ ಸನ್ಮಾನ ಘೋಷಿಸಲಾಗಿದೆ.