ಬಂಡವಾಳ ಮಾರುಕಟ್ಟೆ ನಿಯಂತ್ರಕ 'ಸೆಬಿ'ಯೊಂದಿಗೆ ಕಾನೂನು ಸಮರ ನಡೆಸುತ್ತಿರುವ ಸಹರಾ ಸಂಸ್ಥೆ ಸಣ್ಣ ಹೂಡಿಕೆದಾರರಿಗೆ ನೀಡಬೇಕಾದ ಬಾಕಿ ನೀಡದ ಕಾರಣ ಸಂಸ್ಥೆಯ ಮುಖ್ಯಸ್ಥ 68 ವರ್ಷದ ಸುಬ್ರತಾ ರಾಯ್ ಅವರನ್ನು 2014 ಮಾರ್ಚ್'ನಲ್ಲಿ ಬಂಧಿಸಲಾಗಿತ್ತು.
ನವದೆಹಲಿ(ನ.28): ಜೈಲು ಶಿಕ್ಷೆಯನ್ನು ತಪ್ಪಿಸಿಕೊಳ್ಳಬೇಕಾದರೆ 2017, ಫೆಬ್ರವರಿ 6 ರೊಳಗೆ 600 ಕೋಟಿ ರೂ. ಪಾವತಿಸಿ ಎಂದು ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ತಾಯಿ ಮರಣ ಹೊಂದಿದ ಕಾರಣ ಸುಬ್ರತಾ ರಾಯ್ ಅವರು ಕಳೆದ ಮೇ ತಿಂಗಳಿಂದ ಪೆರೋಲ್ ಮೇಲಿದ್ದು ಮುಂದಿನ ವರ್ಷದ ಫೆಬ್ರವರಿ 6ರೊಳಗೆ 600 ಕೋಟಿ ರೂ. ಪಾವತಿಸದಿದ್ದರೆ ಪೆರೋಲ್ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ. ಒಂದು ವೇಳೆ ಜೈಲಿನಿಂದ ಹೊರಗುಳಿಯಬೇಕಾದರೆ ನಿಗದಿಪಡಿಸಿರುವ ಮೊತ್ತವನ್ನು ಪಾವತಿಸಿ ಎಂದು ಕೋರ್ಟ್ ತಿಳಿಸಿದೆ.
ಬಂಡವಾಳ ಮಾರುಕಟ್ಟೆ ನಿಯಂತ್ರಕ 'ಸೆಬಿ'ಯೊಂದಿಗೆ ಕಾನೂನು ಸಮರ ನಡೆಸುತ್ತಿರುವ ಸಹರಾ ಸಂಸ್ಥೆ ಸಣ್ಣ ಹೂಡಿಕೆದಾರರಿಗೆ ನೀಡಬೇಕಾದ ಬಾಕಿ ನೀಡದ ಕಾರಣ ಸಂಸ್ಥೆಯ ಮುಖ್ಯಸ್ಥ 68 ವರ್ಷದ ಸುಬ್ರತಾ ರಾಯ್ ಅವರನ್ನು 2014 ಮಾರ್ಚ್'ನಲ್ಲಿ ಬಂಧಿಸಲಾಗಿತ್ತು.
ಒಟ್ಟು 24 ಸಾವಿರ ಕೋಟಿ ರೂ. ಹಣದಲ್ಲಿ 11 ಸಾವಿರ ಕೋಟಿ ರೂ. ಪಾವತಿಸಿದ್ದು ಉಳಿದ ಬಾಕಿ ಹಣವನ್ನು ಎರಡೂವರೆ ವರ್ಷದಲ್ಲಿ ಪಾವತಿಸುವುದಾಗಿ ತಿಳಿಸಿದೆ.
ನೀವೇ ಹೇಳಿದಂತೆ 1,87,000 ಕೋಟಿ ರೂ. ಹಣ ಹೊಂದಿರುವಿರಿ ಎಂದು ಹೇಳುತ್ತೀರಿ ಆದರೆ ಇದರಿಂದ ಬಾಕಿಯುಳಿಸಿಕೊಂಡಿರುವ 20 ಸಾವಿರ ಕೋಟಿ ರೂ ಮರು ಮಾವತಿ ಮಾಡಲು ಸಾಧ್ಯವಾಗಿಲ್ಲ ಎಂದು ಸುಪ್ರೀಂ ಕೋರ್ಟ್'ನ ಮುಖ್ಯ ನ್ಯಾಯಾಧೀಶ ಟಿ.ಎಸ್. ಠಾಕೂರ್ ನೇತೃತ್ವದ ತ್ರಸದಸ್ಯತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಸಹರಾ ಪರ ಕೇಂದ್ರದ ಮಾಜಿ ಸಚಿವರು ಆಗಿರುವ ಹಿರಿಯ ವಕೀಲ ಕಪಿಲ್ ಸಿಬಾಲ್ ವಾದ ಮಂಡಿಸುತ್ತಿದ್ದಾರೆ.