ಅದು ಹೇಳೋಕೆ ಮಾತ್ರ ಸರ್ಕಾರಿ ಆಸ್ಪತ್ರೆ, ಆ ಜಿಲ್ಲೆಯ ಜನ್ರಿಗೆ ಸರ್ಕಾರಿ ಆಸ್ಪತ್ರೆ ಇದ್ದು ಇಲ್ಲದಂತಾಗಿದೆ. ಇಲ್ಲಿಗೆ ಬರುವ ನೂರಾರು ಗರ್ಭಿಣಿಯರಿಗೆ ಇಲ್ಲಿನ ಸಿಬ್ಬಂದಿ ಖಾಸಗಿ ಆಸ್ಪತ್ರೆ ಕಡೆ ಕೈ ಮಾಡಿ ತೋರಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ನೂರಾರು ಜನ ಗರ್ಭಿಣಿಯರು ಆಸ್ಪತ್ರೆಗೆ ತಿರುಗಿ ತಿರುಗಿ ರೋಸಿ ಹೋಗಿದ್ದಾರೆ. ಆರೋಗ್ಯ ಸಚಿವರೇ ನೀವು ನೋಡಲೇಬೇಕಾದ ಸ್ಟೋರಿ.
ಬೀದರ್(ಅ.05): ಹೀಗೆ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿರೋ ಗರ್ಭಿಣಿಯರು.. ಮತ್ತೊಂದು ಕಡೆ ಕಣ್ಣೀರಿಡ್ತಿರೋ ಮಹಿಳೆ.. ಇವೆಲ್ಲ ಕಂಡು ಬಂದಿದ್ದು ಬೀದರ್ ಜಿಲ್ಲಾಸ್ಪತ್ರೆಯಲ್ಲಿ.. ಕಳೆದ ನಾಲ್ಕೈದು ದಿನಗಳಿಂದ ಆಸ್ಪತ್ರೆಯ ಸಿಬ್ಬಂದಿ ಸ್ಕ್ಯಾನಿಂಗ್ ಮಾಡದೇ ಪ್ರತಿದಿನ ಅಲೆದಾಡಿಸುತ್ತಿದ್ದಾರೆ. ಇಲ್ಲದಿದ್ರೆ ಖಾಸಗಿ ಆಸ್ಪತ್ರೆಗೆ ಹೋಗಿ ಅಂತಾ ಬೈದು ಕಳಿಸುತ್ತಿದ್ದಾರಂತೆ.. ನಮಗೆ ಹೊರಗಡೆ ಹೋಗಿ ಸ್ಕ್ಯಾನಿಂಗ್ ಮಾಡಿಕೊಳ್ಳಲು ದುಡ್ಡಿಲ್ಲ ಅಂತಾ ನೊಂದ ಗರ್ಭಿಣಿಯರು ಅಳಲು ತೋಡಿಕೊಂಡಿದ್ದಾರೆ.
ಕೇವಲ ಗರ್ಭಿಣಿಯರಿಗೆ ಮಾತ್ರವಲ್ಲ, ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ಸಹ ಇಲ್ಲಿನ ಸಿಬ್ಬಂದಿ ಸ್ಕ್ಯಾನಿಂಗ್ ಮಾಡ್ತಿಲ್ಲ. ಕಳೆದ ಮೂರು ದಿನಗಳ ಹಿಂದೆ ಹೊಟ್ಟೆ ನೋವು ಅಂತಾ ರವಿ ಪಾಟೀಲ್ ಅನ್ನೋ ರೋಗಿ ದಾಖಲಾಗಿದ್ದು ವೈದ್ಯರು ಸ್ಕ್ಯಾನಿಂಗ್ ಮಾಡಿಸಲು ಹೇಳಿದ್ದಾರೆ. ಆದರೆ ಮೂರು ದಿನ ಕಳೆದ್ರೂ ದಿನಂಪ್ರತಿ ನಾಳೆ, ನಾಳೆ ಅನ್ನುತ್ತಲ್ಲೇ ವಾಪಸ್ ಕಳುಹಿಸ್ತಿದ್ದಾರಂತೆ.
ಈ ಬಗ್ಗೆ ಸುದ್ದಿ ಪ್ರಸಾರವಾಗ್ತಿದ್ದಂತೆ ಎಚ್ಚೆತ್ತುಕೊಂಡ ವೈದ್ಯಕೀಯ ಅಧೀಕ್ಷಕರು, ಸ್ಕ್ಯಾನಿಂಗ್ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇದೆ ಅಂತ ಹಾರಿಕೆ ಉತ್ತರ ನೀಡಿದ್ರು.
ಒಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲೇ ರೋಗಿಗಳಿಗೆ ಎಲ್ಲಾ ಸೌಲಭ್ಯ ನೀಡುತ್ತೇವೆ ಎಂದು ಹೇಳುವ ಸಚಿವರು ಹಾಗೂ ಸರ್ಕಾರಕ್ಕೆ ಇಂಥಹ ಆಸ್ಪತ್ರೆಗಳ ಸ್ಥಿತಿ ಕಾಣುತ್ತಿಲ್ಲವೇ.
