ದಂತ ವೈದ್ಯನೊಬ್ಬನ‌ ಯಡವಟ್ಟಿನಿಂದ ವ್ಯಕ್ತಿಯೊಬ್ಬ ಜೀವ ಕಳೆದುಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ (ಡಿ.17): ದಂತ ವೈದ್ಯನೊಬ್ಬನ‌ ಯಡವಟ್ಟಿನಿಂದ ವ್ಯಕ್ತಿಯೊಬ್ಬ ಜೀವ ಕಳೆದುಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ 5 ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿದ್ದ ಗಣೇಶ ಪೇಟೆಯ ನಿವಾಸಿ ಅಬ್ದುಲ್ ಖಾದರ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಹಲ್ಲುನೋವಿನಿಂದ ಬಳಲುತ್ತಿದ್ದ ಅಬ್ದುಲ್ ಖಾದರ್, ಚಿಕಿತ್ಸೆಗೆಂದು ರತ್ನ ಡೆಂಟಲ್ ಕ್ಲಿನಿಕ್​ಗೆ ಹೋಗಿದ್ದರು. ಆಗ ವೈದ್ಯ ಡಾ. ವೀರೇಶ್​, ಮೂರು ಹಲ್ಲುಗಳನ್ನು ಕಿತ್ತಿದ್ದಾರೆ. ಆದ್ರೆ ರಕ್ತಸ್ತ್ರಾವ ಮಾತ್ರ ನಿಂತಿರಲಿಲ್ಲ. ಇದರಿಂದ ಕಂಗಾಲಾದ ಅಬ್ದುಲ್ ಖಾದರ್ ಮತ್ತೆ ಆಸ್ಪತ್ರೆಗೆ ಬಂದಿದ್ದಾರೆ. ರೋಗಿಯ ಗಂಭೀರ ಪರಿಸ್ಥಿತಿ ಅರಿತ ವೈದ್ಯ ವೀರೇಶ್, ರೋಗಿಯ ಬಳಿ ಪತ್ರಕ್ಕೆ ಸಹಿ ಮಾಡಿಸಿಕೊಂಡು, ಕುಟುಂಬಕ್ಕೆ 10 ಸಾವಿರ ಕೊಟ್ಟು ಕಿಮ್ಸ್ ಗೆ ದಾಖಲು ಮಾಡಿ ಹೋಗಿದ್ದಾನೆ‌. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ್ರೂ ರಕ್ತಸ್ರಾವ ಮಾತ್ರ ನಿಂತಿಲ್ಲ.. ಕಳೆದು 5 ದಿನಗಳ ಜೀವನ್ಮರಣದ ಹೋರಾಟ ನಡೆಸಿದ್ದರೋಗಿ ಕೊನೆಗೂ ಮೃತಪಟ್ಟಿದ್ದಾರೆ.. ಸಾವಿಗೆ ವೈದ್ಯನ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿರುವ ಮೃತನ ಸಂಬಂಧಿಕರು, ಶಹಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.