ಯೋಗಗುರು ಬಾಬಾ ರಾಮ್ ದೇವ್‌ರ ಪತಂಜಲಿ ಆಯುರ್ವೇದ ಸಂಸ್ಥೆ ತನ್ನ ಉತ್ಪನ್ನಗಳನ್ನು ಆನ್‌ಲೈನ್ ಮಾರಾಟಕ್ಕಾಗಿ ಹಲವು ಇ-ಕಾಮರ್ಸ್ ವೆಬ್‌ಸೈಟ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ನವದೆಹಲಿ: ಯೋಗಗುರು ಬಾಬಾ ರಾಮ್ ದೇವ್‌ರ ಪತಂಜಲಿ ಆಯುರ್ವೇದ ಸಂಸ್ಥೆ ತನ್ನ ಉತ್ಪನ್ನಗಳನ್ನು ಆನ್‌ಲೈನ್ ಮಾರಾಟಕ್ಕಾಗಿ ಹಲವು ಇ-ಕಾಮರ್ಸ್ ವೆಬ್‌ಸೈಟ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಪೇಟಿಎಂ ಮಾಲ್, ಬಿಗ್ ಬಾಸ್ಕೆಟ್, ಕಾರ್ಟ್, ಗ್ರೋರ್ಸ್‌, ಅಮೆಜಾನ್, ನೆಟ್‌ಮೆಡ್ಸ್, 1ಎಂಜಿ, ಶಾಪ್ ಕ್ಲೂಸ್ ಮತ್ತಿತರ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಪತಂಜಲಿ ಉತ್ಪನ್ನಗಳು ಲಭ್ಯವಾಗಲಿದೆ.

ಸಾಂಪ್ರದಾಯಿಕ ಚಿಲ್ಲರೆ ಮಾರುಕಟ್ಟೆಯಿಂದ ವಿಸ್ತೃತಗೊಳ್ಳುವುದರೊಂದಿಗೆ, ಸುಲಭ ಮತ್ತು ದಕ್ಷ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸುವ ಗುರಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯೋಗಗುರು ಬಾಬಾ ರಾಮ್ ದೇವ್ ತಿಳಿಸಿದ್ದಾರೆ.