ಆನ್'ಲೈನ್'ನಲ್ಲಿ ಪತಾಂಜಲಿ, 1 ಸಾವಿರ ಕೋಟಿ ರೂ. ಮಾರಾಟದ ಗುರಿ

First Published 16, Jan 2018, 6:24 PM IST
Patanjali goes online aims over Rs 1000 crore sales in 2018
Highlights

ದೈತ್ಯ ಆನ್'ಲೈನ್ ಕಂಪನಿಗಳಾದ ಅಮೇಜಾನ್, ಫ್ಲಿಕ್'ಕಾರ್ಟ್ ಒಳಗೊಂಡ 8 ಸಂಸ್ಥೆಗಳ ಸಹಯೋಗದಲ್ಲಿ ಮಾರಾಟ ಮಾಡಲಿದೆ.

ನವದೆಹಲಿ(ಜ.16): ಯೋಗ ಗುರು ಬಾಬಾ ರಾಮ್'ದೇವ್  ಮಾಲೀಕತ್ವದ ಪತಾಂಜಲಿ ಆಯುರ್ವೇದ ಸಂಸ್ಥೆ  ಆನ್'ಲೈನ್ ಮಾರಾಟಕ್ಕೆ ಕಾಲಿಡಲಿದ್ದು ಪ್ರಸ್ತುತ 2018ನೇ ವರ್ಷದಲ್ಲಿ ತ್ವರಿತಗತಿಯಲ್ಲಿ ಮಾರಾಟವಾಗುವ ಗ್ರಾಹಕ ಉತ್ಪನ್ನಗಳನ್ನು  1 ಸಾವಿರ ಕೋಟಿ ರೂ. ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ದೈತ್ಯ ಆನ್'ಲೈನ್ ಕಂಪನಿಗಳಾದ ಅಮೇಜಾನ್, ಫ್ಲಿಕ್'ಕಾರ್ಟ್ ಒಳಗೊಂಡ 8 ಸಂಸ್ಥೆಗಳ ಸಹಯೋಗದಲ್ಲಿ ಮಾರಾಟ ಮಾಡಲಿದೆ. ಅಲ್ಲದೆ ಪತಾಂಜಲಿಯ ನೂತನ ಉತ್ಪನ್ನಗಳಾದ ' ನೀರಿನ ಬ್ರ್ಯಾಂಡ್ ದಿವ್ಯ ಜಲ್, ಪಾದರಕ್ಷೆಗಳ ಬ್ರ್ಯಾಂಡ್ ಪಾರಿದಾನ್' ಅನ್ನು ಈ ವರ್ಷ ಬಿಡುಗಡೆ ಮಾಡಲಾಗುತ್ತದೆ.

ಈಗ ವಾಣಿಜ್ಯ ಮಾರಾಟಕ್ಕೆ ಲಗ್ಗೆಯಿಟ್ಟಿದ್ದು, ಕಳೆದ ವರ್ಷದ ಡಿಸೆಂಬರ್'ನಲ್ಲಿ ಪತಾಂಜಲಿಯ 10 ಕೋಟಿ ಉತ್ಪನ್ನಗಳು ಮಾರಾಟವಾಗಿವೆ. ಇದು ಗ್ರಾಹಕರಿಗೆ  ಸುಲಭ ರೀತಿಯಲ್ಲಿ ಉತ್ಪನ್ನಗಳನ್ನು ತಲುಪಿಸುವುದಾಗಿದ್ದು, ವಿವಿಧ ರೀತಿಯ ಉತ್ಪನ್ನಗಳನ್ನು ಖರೀದಿಸುವ ಆಯ್ಕೆ ಹೊಂದಿರುತ್ತಾರೆ' ಎಂದು ಮುಖ್ಯಸ್ಥರಾದ ಬಾಬಾ ರಾಮ್'ದೇವ್ ತಿಳಿಸಿದ್ದಾರೆ'

loader