Asianet Suvarna News Asianet Suvarna News

ರನ್ ವೇಯಲ್ಲಿ ಇಳ್ಸಪ್ಪಾ ಅಂದ್ರೆ ಕೆರೆಯಲ್ಲಿ ವಿಮಾನ ಇಳ್ಸಿದ ಪೈಲೆಟ್!

ರನ್ ವೇ ಬದಲು ಕೆರೆಯಲ್ಲಿ ಲ್ಯಾಂಡ್ ಆದ ವಿಮಾನ! ಪೈಲೆಟ್ ನಿಯಂತ್ರಣ ತಪ್ಪಿ ಕೆರೆಯಲ್ಲಿ ಲ್ಯಾಂಡ್! ನ್ಯೂಜಿಲೆಂಡ್ ನ ವೆಲ್ಲಿಂಗ್ಟನ್ ಬಳಿ ನಡೆದ ಘಟನೆ! ಪ್ರಯಾಣಿಕರು, ಸಿಬ್ಬಂದಿ ಅಪಾಯದಿಂದ ಪಾರು 
 

Passanger Plane quits Runway, Ditches Into Pacific Lagoon
Author
Bengaluru, First Published Sep 28, 2018, 9:55 AM IST
  • Facebook
  • Twitter
  • Whatsapp

ವೆಲ್ಲಿಂಗ್ಟನ್(ಸೆ.28): ‘ನೋಡಪ್ಪಾ ರನ್ ವೇ ಇಲ್ಲಿದೆ, ನೀನು ಸ್ವಲ್ಪ ಲೆಫ್ಟ್ ತೋಗೊಂಡು, ಹಂಗೆ ರೈಟ್ ತಿರುಗಿಸಿ ನೀಟಾಗಿ ಇಳ್ಸಪ್ಪಾ..’ಅಂತಾ ವಿಮಾನ ನಿಲ್ದಾಣದ ಆಪರೇಟರ್ ಆ ಪೈಲೆಟ್ ಗೆ ಹೇಳಿದ್ದೇ ಬಂತು. ಎಸ್ ಸರ್ ಅಂದವ್ನೇ ನೇರವಾಗಿ ವಿಮಾನವನ್ನು ಕೆರೆಗೆ ಇಳಿಸಿದ್ದಾನೆ. 

ಹೌದು, ಪ್ರಯಾಣಿಕರಿದ್ದ ವಿಮಾನವೊಂದು ಲ್ಯಾಂಡಿಂಗ್ ಸಮಯದಲ್ಲಿ ಪೈಲೆಟ್ ನಿಯಂತ್ರಣ ತಪ್ಪಿ ಕೆರೆಗೆ ಇಳಿದ ಘಟನೆ ನ್ಯೂಜಿಲೆಂಡ್ ನ ವೆಲ್ಲಿಂಗ್ಟನ್ ಬಳಿ ನಡೆದಿದೆ.

ಏರ್ ನ್ಯೂಗಿನಿಗೆ ಸೇರಿದ ವಿಮಾನ ಇಲ್ಲಿನ ವೆನೋ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಪೈಲೆಟ್ ನಿಯಂತ್ರಣ ತಪ್ಪಿ ಪಕ್ಕದ ಚುಕ್ ಕೆರೆಯಲ್ಲಿ ಲ್ಯಾಂಡ್ ಆಗಿದೆ.

ಸದ್ಯ ವಿಮಾನದಲ್ಲಿದ್ದ 36 ಪ್ರಯಾಣಿಕರು ಮತ್ತು 11 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಅಪಘಾತಕ್ಕೆ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios