ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಸಮಾಧಿ ಪಕ್ಕದಲ್ಲೇ ಪಾರ್ವತಮ್ಮ ಮಣ್ಣಲ್ಲಿ ಮಣ್ಣಾಗಲಿದ್ದಾರೆ. ಸಂಜೆ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಸದಾಶಿವನಗರದ ನಿವಾಸದಿಂದ ಸಂಜೆ 4:30ಕ್ಕೆ ಮೆರವಣಿಗೆ ಮೂಲಕ ಪಾರ್ವತಮ್ಮನವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ಕರೆದೊಯ್ಯಲಾಗುತ್ತದೆ.

ಬೆಂಗಳೂರು(ಮೇ 31): ಈ ಮೊದಲು ನಿಗದಿಯಾದಂತೆ ಪೂರ್ಣಪ್ರಜ್ಞ ಮೈದಾನದಲ್ಲಿ ಪಾರ್ವತಮ್ಮ ರಾಜಕುಮಾರ್ ಅವರ ಅಂತಿಮ ದರ್ಶನ ಇರುವುದಿಲ್ಲ. ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲೇ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಅಲ್ಲಿಯೇ ಪಾರ್ವತಮ್ಮರ ಅಂತಿಮ ದರ್ಶನ ಮಾಡಬೇಕು. ಪೂರ್ಣಪ್ರಜ್ಞ ಮೈದಾನಕ್ಕೆ ಹೋಗಬಾರದು ಎಂದು ಫಿಲಂಚೇಂಬರ್ ಅಧ್ಯಕ್ಷ ಸಾರಾ ಗೋವಿಂದು ಮನವಿ ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred