ಈ ವರ್ಷದ ಮೂರನೇ ಮತ್ತು ಕೊನೆಯ ಸೂರ್ಯ ಗ್ರಹಣ ಶನಿವಾರ ಸಂಭವಿಸಲಿದ್ದು, ಜಗತ್ತಿನಾದ್ಯಂತ ಬಾಹ್ಯಾಕಾಶಪ್ರಿಯರು ಪ್ರಕೃತಿಯ ಈ ಕೌತುಕ ವೀಕ್ಷಣೆಗೆ ಸಿದ್ಧರಾಗಿದ್ದಾರೆ. ಆದರೆ ಈ ಗ್ರಹ ಭಾರತದಲ್ಲಿ ಮಾತ್ರ ಗೋಚರಿಸುವುದಿಲ್ಲ. 

ನವದೆಹಲಿ: ಈ ವರ್ಷದ ಮೂರನೇ ಮತ್ತು ಕೊನೆಯ ಸೂರ್ಯ ಗ್ರಹಣ ಶನಿವಾರ ಸಂಭವಿಸಲಿದ್ದು, ಜಗತ್ತಿನಾದ್ಯಂತ ಬಾಹ್ಯಾಕಾಶಪ್ರಿಯರು ಪ್ರಕೃತಿಯ ಈ ಕೌತುಕ ವೀಕ್ಷಣೆಗೆ ಸಿದ್ಧರಾಗಿದ್ದಾರೆ. 

ಇದೊಂದು ಭಾಗಶಃ ಸೂರ್ಯ ಗ್ರಹಣವಾಗಿದ್ದು ಉತ್ತರ ಯುರೋಪ್‌, ವಾಯುವ್ಯ ಏಷ್ಯಾ, ಉತ್ತರ ಅಮೆರಿಕಾ ಮತ್ತು ಆರ್ಕಟಿಕ್‌ ಪ್ರದೇಶದಲ್ಲಿ ಮಾತ್ರ ವೀಕ್ಷಣೆಗೆ ಲಭ್ಯವಿದೆ. ಹೀಗಾಗಿ ಇದು ಭಾರತದಲ್ಲಿ ವೀಕ್ಷಣೆಗೆ ಲಭ್ಯವಿಲ್ಲ.

ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಹಾದು ಹೋಗುವಾಗ ಸೂರ್ಯನ ಬೆಳಕಿಗೆ ತಡೆಯಾಗುವ ಪ್ರಕ್ರಿಯೆಯನ್ನು ಸೂರ್ಯ ಗ್ರಹಣ ಎನ್ನುತ್ತಾರೆ.