ಪತಿ, ಮನೆಗೆಲಸದ ಮಹಿಳೆ ಜೊತೆ ಸರಸ ಸಲ್ಲಾಪ ನಡೆಸುತ್ತಿದ್ದಾಗ ಹೇಳುತ್ತಿದ್ದ ಪದಗಳನ್ನ ಕೇಳಿಸಿಕೊಂಡಿದ್ದ ಗಿಳಿಯೂ ಅದೇ ಪದಗಳನ್ನ ಪತ್ನಿ ಮುಂದೆ ಪದೇ ಪದೇ ಹೇಳತೊಡಗಿತ್ತು, ಇದರಿಂದ ಅನುಮಾನಗೊಂಡ ಪತ್ನಿ ವಿಚಾರಿಸಿದಾಗ ಮೇಲ್ನೋಟಕ್ಕೆ ಅಕ್ರಮ ಸಂಬಂಧ ಕಂಡುಬಂದಿದ್ದು, ಹವಾಲಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಬಂಧದ ಕುರಿತು ದೂರು ನೀಡಿದ್ಧಾರೆ.

ಹವಾಲಿ(ಅ.28): ಗಿಳಿ ಬಹುತೇಕ ಜನರ ಪ್ರೀತಿಯ ಪಕ್ಷಿ. ಮನೆಯಲ್ಲಿ ಗಿಳಿಯನ್ನ ಸಾಕುವುದು ಬಹುತೇಕರ ಹವ್ಯಾಸ. ಆದರೆ, ಮುದ್ದು ಮುದ್ದು ಮಾತನಾಡುವ ಈ ಗಿಳಿಗಳು ಒಂದೊಮ್ಮೆ ಕಷ್ಟಕ್ಕೆ ಸಿಲುಕಿಸುತ್ತವೆ ಎಂಬುದನ್ನ ಮರೆಯದಿರಿ.ಕುವೈತ್`ನ ವ್ಯಕ್ತಿಯೊಬ್ಬ ತನ್ನ ಮನೆಗೆಲಸದ ಮಹಿಳೆ ಜೊತೆ ಹೊಂದಿದ್ದ ಅಕ್ರಮ ಸಂಬಂಧವನ್ನ ಗಿಳಿ ಆತನ ಪತ್ನಿ ಮುಂದೆ ಬಹಿರಂಗಪಡಿಸಿದ ಘಟನೆ ನಡೆದಿದೆ.

ಪತಿ, ಮನೆಗೆಲಸದ ಮಹಿಳೆ ಜೊತೆ ಸರಸ ಸಲ್ಲಾಪ ನಡೆಸುತ್ತಿದ್ದಾಗ ಹೇಳುತ್ತಿದ್ದ ಪದಗಳನ್ನ ಕೇಳಿಸಿಕೊಂಡಿದ್ದ ಗಿಳಿಯೂ ಅದೇ ಪದಗಳನ್ನ ಪತ್ನಿ ಮುಂದೆ ಪದೇ ಪದೇ ಹೇಳತೊಡಗಿತ್ತು, ಇದರಿಂದನುಮಾನಗೊಂಡ ಪತ್ನಿ ವಿಚಾರಿಸಿದಾಗ ಮೇಲ್ನೋಟಕ್ಕೆ ಅಕ್ರಮ ಸಂಬಂಧ ಕಂಡುಬಂದಿದ್ದು, ಹವಾಲಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಬಂಧದ ಕುರಿತು ದೂರು ನೀಡಿದ್ಧಾರೆ.

ಕುವೈತ್`ನಲ್ಲಿ ಅನೈತಿಕ ಸಂಬಂಧ ಹೊಂದುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.