ಮೋದಿ ಆ ಕಡೆ ರಫೇಲ್ ಡೀಲನ್ನು ಬದಲಿಸುತ್ತಿರುವಾಗ, ಪರ್ರಿಕರ್ ಗೋವಾದಲ್ಲಿ ‘ಮೀನು ಖರೀದಿಸುತ್ತಿದ್ದರು’! ರಫೇಲ್ ಡೀಲ್ ಬಗ್ಗೆ ಹಾಲಿ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ತಮ್ಮ ನಿಲುವನ್ನು ಬದಲಾಯಿಸಿದ್ದೇಕೆ?

ಸವದತ್ತಿ, ಬೆಳಗಾವಿ: ಪ್ರಧಾನಿ ಮೋದಿ ರಫೇಲ್ ಡೀಲ್ ಬದಲಿಸಿದ್ದು ಆಗಿನ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರಿಗೆನೇ ಗೊತ್ತಿರಲಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜನಾಶಿರ್ವಾದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಆ ಕಡೆ ರಫೇಲ್ ಡೀಲನ್ನು ಬದಲಿಸುತ್ತಿರುವಾಗ, ಪರ್ರಿಕರ್ ಗೋವಾದಲ್ಲಿ ‘ಮೀನು ಖರೀದಿಸುತ್ತಿದ್ದರು’ ಎಂದು ಟೀಕಿಸಿದ್ದಾರೆ.

ರಫೇಲ್ ಡೀಲ್ ಬಗ್ಗೆ ಹಾಲಿ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ತಮ್ಮ ನಿಲುವನ್ನು ಏಕೆ ಬದಲಾಯಿಸಿದ್ದಾರೆ ಎಂದು ಪ್ರಶ್ನಿಸಿ ರಾಹುಲ್ ಈ ಹಿಂದೆ ಟ್ವೀಟ್ ಕೂಡಾ ಮಾಡಿದ್ದರು.

ರಫೇಲ್ ಯುದ್ಧ ವಿಮಾನಗಳ ಬೆಲೆಯನ್ನು ತಾನು ಬಹಿರಂಗಪಡಿಸುವುದಾಗಿ ಕಳೆದ ನವೆಂಬರ್’ನಲ್ಲಿ ಹೇಳಿಕೆ ನೀಡಿದ್ದ ನಿರ್ಮಲಾ ಸೀತರಾಮನ್, ‘ಅದು ಗೌಪ್ಯ ವಿಷಯ’ ಎಂದು ಫೆಬ್ರವರಿಯಲ್ಲಿ ತಮ್ಮ ನಿಲುವನ್ನು ಯಾಕೆ ಬದಲಾಯಿಸಿದ್ದಾರೆ? ಎಂದು ರಾಹುಲ್ ಪ್ರಶ್ನಿಸಿದ್ದರು. ಬಳಿಕ ಉತ್ತರಗಳಿಗೆ ಈ ಆಯ್ಕೆಗಳನ್ನು ನೀಡಿದ್ದರು.

  • ಭ್ರಷ್ಟಾಚಾರ
  • ಮೋದಿಯವರ ರಕ್ಷಣೆಗೆ
  • ಮೋದಿಯವರ ಸ್ನೇಹಿತನ ರಕ್ಷಣೆಗೆ
Scroll to load tweet…