ಈ ಮೂಲಕ ಪರಿಕ್ಕರ್ ಬಾಂಗ್ಲಾದೇಶಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊದಲ ರಕ್ಷಣಾ ಮಂತ್ರಿ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ನವದೆಹಲಿ(ನ.29): ಉಭಯ ರಾಷ್ಟ್ರಗಳ ರಕ್ಷಣಾ ಭಾಂದವ್ಯ ಹೆಚ್ಚಿಸುವ ಸಲುವಾಗಿ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನಾಳೆಯಿಂದ ಎರಡು ದಿನಗಳ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಭೇಟಿಯ ವೇಳೆ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಮೂಲಕ ಪರಿಕ್ಕರ್ ಬಾಂಗ್ಲಾದೇಶಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊದಲ ರಕ್ಷಣಾ ಮಂತ್ರಿ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ. ಬುಧವಾರ ಬಾಂಗ್ಲಾದೇಶ ರಾಷ್ಟ್ರಪತಿ ಅಬ್ದುಲ್ ಹಮೀದ್ ಅವರನ್ನು ರಾಷ್ಟ್ರ ರಾಜಧಾನಿ ಢಾಕಾದಲ್ಲಿ ಬೇಟಿಯಾಗಲಿದ್ದಾರೆ.

ರಕ್ಷಣಾ ಸಚಿವರು ಈ ಮೊದಲೇ ಭಾಂಗ್ಲಾದೇಶಕ್ಕೆ ಭೇಟಿ ನೀಡಬೇಕಿತ್ತು ಆದರೆ ಕಾರಣಾಂತರಗಳಿಂದ ಭೇಟಿಯನ್ನು ಮುಂದೂಡಲಾಗಿತ್ತು ಎಂದು ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಉಭಯ ದೇಶಗಳ ನಡುವೆ ರಕ್ಷಣಾ-ಭಾಂದವ್ಯ ಬಲಪಡಿಸುವುದು ಹಾಗೂ ಬಾಂಗ್ಲಾ ಮೇಲೆ ಚೀನಾ ಪ್ರಾಬಲ್ಯ ತಗ್ಗಿಸುವುದು ಪರಿಕ್ಕರ್ ಭೇಟಿಯ ಮುಖ್ಯ ಉದ್ದೇಶ ಎಂದು ಉನ್ನತ ಮೂಲಗಳು ತಿಳಿಸಿವೆ.