ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯಡಿ ಸೇವಾ ನಿವೃತ್ತರು ಪರಿಷ್ಕೃತ ಪಿಂಚಣಿ ಪಡೆಯುವಲ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು 2 ತಿಂಗಳೊಳಗಾಗಿ ಬಗೆಹರಿಸಲಾಗುವುದು ಎಂದು ರಕ್ಷಣಾ ಸಚಿವ ಮನೋಹರ್ ಪಾರಿಕರ್ ಭರವಸೆ ನೀಡಿದ್ದಾರೆ.

ಶಿರೋಡ,ಗೋವಾ (ನ.05): ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯಡಿ ಸೇವಾ ನಿವೃತ್ತರು ಪರಿಷ್ಕೃತ ಪಿಂಚಣಿ ಪಡೆಯುವಲ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು 2 ತಿಂಗಳೊಳಗಾಗಿ ಬಗೆಹರಿಸಲಾಗುವುದು ಎಂದು ರಕ್ಷಣಾ ಸಚಿವ ಮನೋಹರ್ ಪಾರಿಕರ್ ಭರವಸೆ ನೀಡಿದ್ದಾರೆ.

ಕಳೆದ 43 ವರ್ಷಗಳಿಂದ ಏಕಶ್ರೇಣಿ ಏಕ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಇದಕ್ಕೆ ಸರ್ಕಾರ ಕೂಡಾ ಒಪ್ಪಿದೆ. ಸಂಸತ್ತಿನಲ್ಲಿ ಒಪ್ಪಿಗೆ ದೊರೆತ ಮೇಲೆ 7.11.2015 ರನ್ವಯ ಆದೇಶ ಜಾರಿಗೆ ಬರಲಿದೆ. ಶೇ.95 ರಷ್ಟು ಸೈನಿಕರು ಇದರ ಪ್ರಯೋಜನ ಪಡೆದಿದ್ದಾರೆ. ಶೇ.5 ರಷ್ಟು ಹಿರಿಯ ಸೈನಿಕರಿಗೆ ಇದು ದೊರೆತಿಲ್ಲ. ಅವರಿಗೂ ಶೀಘ್ರದಲ್ಲಿಯೇ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಪಾರಿಕರ್ ಹೇಳಿದ್ದಾರೆ.