ಏಕಶ್ರೇಣಿ ಏಕ ವೇತನ (ಓಆರ್'ಓಪಿ) ಯೋಜನೆಗೆ ಅರ್ಹರಾದವರಿಗೆ ಜನವರಿ ಅಂತ್ಯದೊಳಗೆ ಹಣ ನೀಡಲಾಗುವುದು. ಸುಮಾರು 13 ಸಾವಿರ ಅರ್ಜಿಗಳನ್ನು ಪಿಂಚಣಿ ವಿತರಣಾ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಹೇಳಿದ್ದಾರೆ.

ನವದೆಹಲಿ (ಜ.03): ಏಕಶ್ರೇಣಿ ಏಕ ವೇತನ (ಒಆರ್'ಒಪಿ) ಯೋಜನೆಗೆ ಅರ್ಹರಾದವರಿಗೆ ಜನವರಿ ಅಂತ್ಯದೊಳಗೆ ಹಣ ನೀಡಲಾಗುವುದು. ಸುಮಾರು 13 ಸಾವಿರ ಅರ್ಜಿಗಳನ್ನು ಪಿಂಚಣಿ ವಿತರಣಾ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಹೇಳಿದ್ದಾರೆ.

ರಕ್ಷಣಾ ಸಚಿವಾಲಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಒಆರ್ ಒಪಿ ಬಹಳ ಮುಖ್ಯವಾದ ವಿಚಾರ. ಆದ್ದರಿಂದ ಜನವರಿ ಮೊದಲ ಅಥವಾ ಎರಡನೇ ವಾರದೊಳಗೆ ಪಿಂಚಣಿ ಕೊಡಲಿದ್ದೇವೆ. 13 ಸಾವಿರ ಅರ್ಜಿಗಳನ್ನು ಈಗಾಗಲೇ ಪಿಂಚಣಿ ವಿತರಣಾ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಶೇ.99 ರಷ್ಟು ಸೈನಿಕರಿಗೆ ಸಿಗಲಿದೆ ಎಂದು ಪರ್ರಿಕರ್ ತಿಳಿಸಿದ್ದಾರೆ.