ಪ್ಯಾರಿಸ್ನಲ್ಲಿಯೂ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಈ ಹಿನ್ನೆಲೆಯಲ್ಲಿ ದೆಹಲಿ ಅನುಸರಿಸಿದ ನಿಯಮವನ್ನೇ ಪ್ಯಾರಿಸ್ ಕೂಡ ಅನುಸರಿಸಲು ಮುಂದಾಗಿದೆ.
ಪ್ಯಾರಿಸ್(ಡಿ.10): ಪ್ಯಾರಿಸ್ನಲ್ಲಿಯೂ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಈ ಹಿನ್ನೆಲೆಯಲ್ಲಿ ದೆಹಲಿ ಅನುಸರಿಸಿದ ನಿಯಮವನ್ನೇ ಪ್ಯಾರಿಸ್ ಕೂಡ ಅನುಸರಿಸಲು ಮುಂದಾಗಿದೆ.
ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ದೆಹಲಿಯಲ್ಲಿ ಸಮ-ಬೆಸ ಎಂಬ ಸಂಚಾರ ನಿಯಮವನ್ನು ಜಾರಿಗೆ ತರಲಾಗಿತ್ತು. ಇದರಂತೆ ದೆಹಲಿ ನಿಯಮವನ್ನೇ ಅನುಸರಿಸಲು ಮುಂದಾಗಿರುವ ಪ್ಯಾರಿಸ್ ಕೂಡ, ಸಮ-ಬೆಸ ನಿಯಮವನ್ನು ಜಾರಿಗೆ ತಂದಿದೆ.
ಹೊಸ ನಿಯಮ ಜಾರಿಯಾಗುತ್ತಿದ್ದಂತೆ ಅಲ್ಲಿನ ಸ್ಥಳೀಯರು ಹಾಗೂ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ನಿಯಮವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದಾರೆ. ವಿರೋಧ ನಡುವೆಯೂ ಪ್ಯಾರಿಸ್ ಸರ್ಕಾರ ನಿಯಮವನ್ನು ಜಾರಿ ಮಾಡಿದ್ದು, ಮುಂದಿನ ಗುರುವಾರದವರೆಗೂ ನಿಯಮ ಜಾರಿಯಲ್ಲಿರಲಿದೆ ಎಂದು ಹೇಳಿದೆ. ಖಾಸಗಿ ಕಾರುಗಳ ಮೇಲೆ ಈಗಾಗಲೇ ನಿಷೇಧ ಹೇರಲಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದೆ.
ಹೊಸ ನಿಯಮ ಜಾರಿಗೆ ತಂದ ಕಾರಣ ಹಳೆ ವಾಹನಗಳನ್ನು ತಮ್ಮ ಮನೆಗಳಲ್ಲಿಯೇ ಬಿಟ್ಟ ಅಲ್ಲಿನ ಸಾರ್ವಜನಿಕರು, ಕಚೇರಿ ಹಾಗೂ ಇನ್ನಿತರೆ ಕೆಲಸಗಳಿಗೆ ಓಡಾಡಲು ಸಮಸ್ಯೆ ಎದುರಿಸಿರುವ ದೃಶ್ಯಗಳು ಕಂಡುಬಂದವು.
