ಗಣ್ಯ ವ್ಯಕ್ತಿಗಳು ತಮ್ಮ ಭದ್ರತೆಗೆ, ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಅಮೆರಿಕದ ಖ್ಯಾತ ನಟಿ, ಮಾಡೆಲ್ ಪ್ಯಾರಿಸ್ ಹಿಲ್ಟನ್, ತಮ್ಮ ಎಂಗೇಜ್‌ಮೆಂಟ್ ರಿಂಗ್ ಭದ್ರತೆಗಾಗಿ ರಹಸ್ಯ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದಾರೆ.
ಲಾಸ್ ಏಂಜಲೀಸ್ (ಜ.07): ಗಣ್ಯ ವ್ಯಕ್ತಿಗಳು ತಮ್ಮ ಭದ್ರತೆಗೆ, ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಅಮೆರಿಕದ ಖ್ಯಾತ ನಟಿ, ಮಾಡೆಲ್ ಪ್ಯಾರಿಸ್ ಹಿಲ್ಟನ್, ತಮ್ಮ ಎಂಗೇಜ್ಮೆಂಟ್ ರಿಂಗ್ ಭದ್ರತೆಗಾಗಿ ರಹಸ್ಯ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದಾರೆ. ಪ್ಯಾರಿಸ್ ಹಿಲ್ಟನ್, ಇತ್ತೀಚೆಗಷ್ಟೇ ಕ್ರಿಸ್ ಝಿಲ್ಕಾ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವೇಳೆ ಪ್ಯಾರಿಸ್ಗೆ, ಝಿಲ್ಕಾ 20 ಕ್ಯಾರೆಟ್ ವಜ್ರದ ಉಂಗುರ ಹಾಕಿದ್ದರು.
ಇದರ ಅಂದಾಜು ಬೆಲೆ 13 ಕೋಟಿ ರುಪಾಯಿ. ಹೀಗಾಗಿ ಯಾವುದೇ ಸಮಯದಲ್ಲಿ ಈ ಉಂಗುರ ಕಳೆದುಹೋಗದಂತೆ ನೋಡಿಕೊಳ್ಳಲು, ಹಿಲ್ಟನ್, ಭದ್ರತಾ ಸಿಬ್ಬಂದಿ ನೇಮಿಸಿಕೊಂಡಿದ್ದಾರೆ. ನಟಿ ಹೋದಲ್ಲೆಲ್ಲಾ ಅವರ ಭದ್ರತಾ ಸಿಬ್ಬಂದಿ ಹಿಂಬಾಲಿಸಿ, ಉಂಗುರದ ಮೇಲೆ ಕಣ್ಣಿಡಲಿದ್ದಾರೆ.
