ಅಪ್ಪ-ಅಮ್ಮನ ಹಂಬಲದಲ್ಲಿ ಶಿಶು ಬಲಿಯಾಯ್ತು..!

parents killed infant
Highlights

ಆರೋಪಿ ವಿಷ್ಣು ಮತ್ತು ವಿಮಲಾ ಎಂಬ ಈ ದಂಪತಿಗೆ ಐವರು ಹೆಣ್ಣು ಮಕ್ಕಳಿದ್ದಾರೆ. 6 ನೇ ಮಗುವೂ ಹೆಣ್ಣು ಎಂದು ತಿಳಿದು, ಪತ್ನಿ ಮಲಗಿದ್ದಾಗ ಮಗುವನ್ನು ಹತ್ಯೆಗೈದಿದ್ದ. ಈ ಸಂಬಂಧ ಪತ್ನಿ ತಂದೆ ದೂರು
ನೀಡಿದ್ದರು. 

ಅಹಮದಾಬಾದ್ (ಜೂ. 26): ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ವ್ಯಕ್ತಿಯೋರ್ವ ತನಗೆ ಹುಟ್ಟಿದ 6 ನೇ ಮಗು ಕೂಡಾ ಹೆಣ್ಣು ಎಂಬ ಕಾರಣಕ್ಕೆ ನಾಲ್ಕು ದಿನದ ಹಸುಗೂಸನ್ನು ಹತ್ಯೆಗೈದಿರುವ ದಾರುಣ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ಈ ಸಂಬಂಧ ಗಾಂಧಿನಗರ ಜಿಲ್ಲೆಯ ದೆಹ್ಗಾಂ ತಾಲೂಕಿನ ಮೋತಿ ಮಸಂಗ್ ಗ್ರಾಮದ ಆರೋಪಿ ವಿಷ್ಣು ರಾಥೋಡ್(32)ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿಷ್ಣು ಮತ್ತು ವಿಮಲಾ ಎಂಬ ಈ ದಂಪತಿಗೆ ಐವರು ಹೆಣ್ಣು ಮಕ್ಕಳಿದ್ದಾರೆ. 6 ನೇ ಮಗುವೂ ಹೆಣ್ಣು ಎಂದು ತಿಳಿದು, ಪತ್ನಿ ಮಲಗಿದ್ದಾಗ ಮಗುವನ್ನು ಹತ್ಯೆಗೈದಿದ್ದ. ಈ ಸಂಬಂಧ ಪತ್ನಿ ತಂದೆ ದೂರು  ನೀಡಿದ್ದರು. 

ಔರಂಗಾಬಾದ್ (ಜೂ. 26):  ತನ್ನ 10 ತಿಂಗಳ ಮಗುವನ್ನು ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಹತ್ಯೆಗೈದು, ಬಳಿಕ ಮಗು ಕಾಣೆಯಾಗಿದೆ ಎಂದು ದೂರು ನೀಡಿದ್ದ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಲದೆ, ವಿಚಾರಣೆ ವೇಳೆ ತನಗೆ ಈಗಾಗಲೇ ಗಂಡು  ಮಗುವಿರುವ ಕಾರಣ ಹೆಣ್ಣು ಮಗುಬೇಕಿತ್ತು  ಆದರೆ, ಹೆಣ್ಣು ಮಗು ಹುಟ್ಟದೆ ಗಂಡು ಮಗುವಾಗಿದ್ದಕ್ಕೆ ಮಗುವನ್ನು ತಾನೇ ಕೊಲೆ ಮಾಡಿರುವುದಾಗಿ ಆರೋಪಿ ಮಹಿಳೆಯಾದ ವೇದಿಕಾ ಎರಾಂಡೆ ಎಂಬಾಕೆ ಪೊಲೀಸರ ಬಳಿ  ತಪ್ಪೊಪ್ಪಿಕೊಂಡಿದ್ದಾಳೆ. ಈ ಘಟನೆ ಮಹಾ ರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಪೈಥಾನ್  ಖೇಡಾ ಗ್ರಾಮದಲ್ಲಿ ನಡೆದಿದೆ. 

 

 

loader