Asianet Suvarna News Asianet Suvarna News

ಪರಪ್ಪನ ಅಗ್ರಹಾರ ವಿವಾದ; ಇಂದು ಸಂಜೆಯೊಳಗೆ ತನಿಖಾ ತಂಡದ ಪ್ರಾಥಮಿಕ ವರದಿ ಸಲ್ಲಿಕೆ

* ಪರಪ್ಪನ ಅಗ್ರಹಾರದಲ್ಲಿ ಅವ್ಯವಹಾರ ಪ್ರಕರಣದ ವರದಿ ಸಿದ್ಧ?

* ಇಂದು ಸಂಜೆಯೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ

* ವಿನಯ್ ಕುಮಾರ್ ನೇತೃತ್ವದ ತನಿಖಾ ತಂಡದಿಂದ ವರದಿ ಸಲ್ಲಿಕೆ

* ರೂಪಾ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದ ಪೂರಕ ಸಾಕ್ಷ್ಯ ಸಮೇತ ವರದಿ?

* ಶಶಿಕಲಾ, ತೆಲಗಿಗೆ ಐಷಾರಾಮಿ ಜೀವನಕ್ಕೆ ಸಹಕಾರ ನೀಡಿದ ಅಧಿಕಾರಿಗಳಿಗೆ ಸಂಕಷ್ಟ

parappana agrahara controversy probe team report to be submitted on monday

ಬೆಂಗಳೂರು(ಜುಲೈ 24): ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿವೃತ್ತ ಐಎಎಸ್ ಅಧಿಕಾರಿ ಒಳಗೊಂಡ ತಂಡವು ವರದಿ ಸಿದ್ಧಪಡಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದ ತನಿಖಾ ತಂಡವು ಇಂದು ಸೋಮವಾರ ಸಂಜೆಯೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಡಿಐಜಿ ರೂಪಾ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿರುವ ತಂಡದ ವರದಿಯು ಗೃಹ ಇಲಾಖೆ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಕೈಸೇರಲಿದೆ.

ಪ್ರಾಥಮಿಕ ವರದಿ ನೀಡಲು ಸರ್ಕಾರ ಒಂದು ವಾರ ಗಡುವು ನೀಡಿತ್ತು. ರೂಪ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳ ಸಮೇತ ವರದಿ ಸಲ್ಲಿಕೆ ಸಾಧ್ಯತೆಯಿದೆ. ಹೆಚ್ಚಿನ ತನಿಖೆಯನ್ನು ಸಿಐಡಿಗೆ ವಹಿಸುವಂತೆ ತಂಡವು ಶಿಫಾರಸು ಮಾಡಿರುವುದಾಗಿ ಮೂಲಗಳು ಮಾಹಿತಿ ನೀಡಿವೆ. ಶಶಿಕಲಾ, ತೆಲಗಿಗೆ ಐಷಾರಾಮಿ ಜೀವನಕ್ಕೆ ಸಹಕಾರ ನೀಡಿದ ಅಧಿಕಾರಿಗಳಿಗೆ ಸದ್ಯದಲ್ಲಿ ಸಂಕಷ್ಟ ಸಾಧ್ಯತೆ ಎದುರಾಗಲಿದೆ ಎನ್ನಲಾಗ್ತಿದೆ.

Follow Us:
Download App:
  • android
  • ios