2 ಕ್ಷೇತ್ರಗಳಲ್ಲಿ ಪರಮೇಶ್ವರ್ ಸ್ಪರ್ಧೆ

Parameshwar Contest From 2 Constituency
Highlights

ಕೊರಟಗೆರೆಯಲ್ಲಿ ಗೆಲ್ಲುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬ ಅರಿವು ಪರಮೇಶ್ವರ್ ಅವರಿಗೆ ಆಗಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು : ಕೊರಟಗೆರೆಯಲ್ಲಿ ಗೆಲ್ಲುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬ ಅರಿವು ಪರಮೇಶ್ವರ್ ಅವರಿಗೆ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೊಂದು ವಾದದ ಪ್ರಕಾರ, ಮುಖ್ಯಮಂತ್ರಿಗಳಿಗೆ ಎರಡು ಕಡೆ ಸ್ಪರ್ಧೆಗೆ ಅವಕಾಶ ನೀಡುವುದಿದ್ದರೆ ನನಗೂ ಯಾಕೆ ಈ ಅವಕಾಶ ನೀಡಬಾರದು ಎಂದು ಕೇಳಿ ಹೈಕಮಾಂಡ್ ಕೈ ಕಟ್ಟಿ ಹಾಕುವ ಪರಂ ತಂತ್ರ ಇದಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಬಾರಿ ಕೊರಟಗೆರೆಯಲ್ಲಿ ಸ್ಪರ್ಧಿಸಿ ಪರಾಜಿತರಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಈವರೆಗೂ ತಾವು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳುತ್ತಲೇ ಬಂದಿದ್ದರು. ಆದರೆ ಇದೀಗ ಏಕಾಏಕಿ ಬೆಂಗಳೂರಿನ ಪುಲಕೇಶಿ ನಗರದ ಟಿಕೆಟ್ ಕೂಡ ನೀಡಿ, ನಾನು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೊಸ ವರಸೆ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

loader