ನೋಟ್ ಬ್ಯಾನ್'ನಿಂದ ಸಂಸತ್ ಕಲಾಪಗಳು ಕೋಲಾಹಲಕ್ಕೆ ಶರಣಾಗಿವೆ. ಸತತ ಆರು ದಿನಗಳಿಂದಲೂ ಗದ್ದಲದಿಂದಲೇ ಕಲಾಪ ಮೂಂದೂಡಲಾಗುತ್ತಿದೆ. ಆದರೆ ಇಂದು ಕಲಾಪವನ್ನು ಮುಂದೂಡಿದಾಗ ಸಂಸತ್ ಸದಸ್ಯರು ಸ್ಪೀಕರ್ ಸುಮಿತ್ರ ಮಹಾಜನ್ ಅವರ ಮೇಲೆ ಕಲಾಪದ ಪತ್ರಿಕೆಗಳನ್ನು ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನವದೆಹಲಿ(ನ.24): ನೋಟ್ ಬ್ಯಾನ್'ನಿಂದ ಸಂಸತ್ ಕಲಾಪಗಳು ಕೋಲಾಹಲಕ್ಕೆ ಶರಣಾಗಿವೆ. ಸತತ ಆರು ದಿನಗಳಿಂದಲೂ ಗದ್ದಲದಿಂದಲೇ ಕಲಾಪ ಮೂಂದೂಡಲಾಗುತ್ತಿದೆ.
ಆದರೆ ಇಂದು ಕಲಾಪವನ್ನು ಮುಂದೂಡಿದಾಗ ಸಂಸತ್ ಸದಸ್ಯರು ಸ್ಪೀಕರ್ ಸುಮಿತ್ರ ಮಹಾಜನ್ ಅವರ ಮೇಲೆ ಕಲಾಪದ ಪತ್ರಿಕೆಗಳನ್ನು ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಸದಸ್ಯರ ಈ ವರ್ತನೆಗೆ ಯಾವುದೇ ಪ್ರತಿಕ್ರಿಯೆ ನೀಡದ ಸ್ಪೀಕರ್ ತಮ್ಮ ಪಾಡಿಗೆ ಹೊರನಡೆದರು.
