ತಮ್ಮದೇ ನೈಜ ಎಐಎಡಿಎಂಕೆ ಪಕ್ಷ ಎಂದು ಹೇಳಿಕೊಂಡಿರುವ ಮಧುಸೂದನ್, ತಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಶಶಿಕಲಾ ಅವರಿಗೆ ಯಾವ ಅಕಾರವಿದೆ ಎಂದು ಪ್ರಶ್ನಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಯಾರಾಗಬೇಕು ಎಂದು ನಿರ್ಧರಿಸುವುದು ನಮ್ಮ ಅಧಿಕಾರವಾಗಿದೆ. ಹೊಸ ಪ್ರಧಾನ ಕಾರ್ಯದರ್ಶಿಯ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಶೀಘ್ರವೇ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಚೆನ್ನೈ(ಫೆ.12): ಎಐಎಡಿಎಂಕೆ ಪಕ್ಷದಲ್ಲಿ ಒಂದೆಡೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಮತ್ತು ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮಧ್ಯೆ ಅಕಾರಕ್ಕೆ ಕಿತ್ತಾಟ ನಡೆಯುತ್ತಿರುವಾಗಲೇ, ಈಗ ಆಸ್ತಿಪಾಸ್ತಿಗಳ ಮೇಲಿನ ಹಕ್ಕು ಯಾರಿಗೆ ಸೇರಿದ್ದು ಎಂಬ ಕುರಿತಾಗಿ ವಿವಾದ ಸೃಷ್ಟಿಯಾಗಿದೆ. ಪನ್ನೀರ್ ಬಣದಲ್ಲಿರುವ ಎಐಎಡಿಎಂಕೆ ಸ್ಥಾಯಿ ಸಮಿತಿ ಮುಖ್ಯಸ್ಥ ಎ ಮಧುಸೂಧನನ್ ಮತ್ತು ಶಶಿಕಲಾ ಬಣದಲ್ಲಿರುವ ಎಐಎಡಿಎಂಕೆ ಕಾನೂನು ಘಟಕದ ಮುಖ್ಯಸ್ಥ ದುರೈ ಪಂಡಿಯನ್ ಅವರು ಪಕ್ಷದ ಆಸ್ತಿಯನ್ನು ರಕ್ಷಿಸಲು ಚುನಾವಣಾ ಆಯೋಗದ ಮೊರೆ ಹೋಗುವುದಾಗಿ ಹೇಳಿದ್ದಾರೆ.

ತಮ್ಮದೇ ನೈಜ ಎಐಎಡಿಎಂಕೆ ಪಕ್ಷ ಎಂದು ಹೇಳಿಕೊಂಡಿರುವ ಮಧುಸೂದನ್, ತಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಶಶಿಕಲಾ ಅವರಿಗೆ ಯಾವ ಅಕಾರವಿದೆ ಎಂದು ಪ್ರಶ್ನಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಯಾರಾಗಬೇಕು ಎಂದು ನಿರ್ಧರಿಸುವುದು ನಮ್ಮ ಅಧಿಕಾರವಾಗಿದೆ. ಹೊಸ ಪ್ರಧಾನ ಕಾರ್ಯದರ್ಶಿಯ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಶೀಘ್ರವೇ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ಎಐಎಡಿಎಂಕೆಯ ಆಸ್ತಿ 224 ಕೋಟಿ ರು. ಇದೆ. ತಮ್ಮ ಅನುಮತಿ ಇಲ್ಲದೇ ಬ್ಯಾಂಕ್ ಖಾತೆಯನ್ನು ಬಳಕೆ ಮಾಡದಂತೆ ಪನ್ನೀರ್ ಸೆಲ್ವಂ ಅವರು ಬ್ಯಾಂಕುಗಳಿಗೆ ಸೂಚಿಸಿದ್ದಾರೆ. ಪಕ್ಷ ಮತ್ತು ಪಕ್ಷದ ಆಸ್ತಿಪಾಸ್ತಿಯ ರಕ್ಷಣೆಗಾಗಿ ನಾವು ಕಾನೂನೂ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮಧುಸೂಧನನ್ ಹೇಳಿದ್ದಾರೆ.