ಬೆಂಗಳೂರು (ಫೆ.15): ಪರಪ್ಪನ ಅಗ್ರಹಾರದ ಮುಂದೆ ಪನ್ನೀರ್ ಸೆಲ್ವಂ ಬೆಂಬಲಿಗರು ಶಶಿಕಲಾ ಬೆಂಬಲಿಗರಿಗೆ ಸೇರಿದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.  ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. 5 ಸ್ಕಾರ್ಪಿಯೋ , 1 ಇನ್ನೋವಾ ಕಾರು ಸಂಪೂರ್ಣ ಜಖಂಗೊಂಡಿದೆ. 

ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಪರಿಸ್ಥಿತಿ ಬಿಗಡಾಯಿಸಿದೆ.

ಶಶಿಕಲಾಗೆ ಕೈದಿ ನಂ. 1071, ಇಳವರಿಸಿಗೆ ಕೈದಿ ನಂ 10712 ಎಂದು ಗುರುತಿಸಲಾಗಿದೆ. ನನಗೆ ಶುಗರ್​ ಇದೆ ಎಂದು ಹೇಳಿರುವ ಶಶಿಕಲಾ ನ್ಯಾಯಾಧೀಶರ ಮುಂದೆ ಮನೆ ಊಟಕ್ಕೆ ಅವಕಾಶ ಕೋರಿದ್ದರು. ಆದರೆ ಶಶಿಕಲಾ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.