Asianet Suvarna News Asianet Suvarna News

ಗೋರಖ್'ಪುರದಲ್ಲಿ ಮತ್ತೆ ಸಾವಿನ ರುದ್ರನರ್ತನ; 3 ದಿನದಲ್ಲಿ 61 ಮಕ್ಕಳು ಸಾವು

ಮೂರು ವಾರಗಳ ಹಿಂದೆ ಆಕ್ಸಿಜನ್ ಸಿಲಿಂಡರ್ ಪೂರೈಕೆಯ ಕೊರತೆಯಿಂದ ಸುಮಾರು 70 ಮಕ್ಕಳು ಸಾವನಪ್ಪಿದ ಘಟನೆ ಇನ್ನೂ ಹಸಿಯಿರುವಾಗಲೇ, ಉತ್ತರ ಪ್ರದೇಶ ಗೋರಖ್'ಪುರದ ಬಿಆರ್'ಡಿ ಆಸ್ಪತ್ರೆಯಲ್ಲಿ ಸಾವಿನ ರುದ್ರ ನರ್ತನ ಮುಂದುವರೆದಿದೆ.

Panic strikes Gorakhpur BRD Medical College again 61 children die in 3 days

ಗೋರಖ್'ಪುರ, ಉತ್ತರ ಪ್ರದೇಶ: ಮೂರು ವಾರಗಳ ಹಿಂದೆ ಆಕ್ಸಿಜನ್ ಸಿಲಿಂಡರ್ ಪೂರೈಕೆಯ ಕೊರತೆಯಿಂದ ಸುಮಾರು 70 ಮಕ್ಕಳು ಸಾವನಪ್ಪಿದ ಘಟನೆ ಇನ್ನೂ ಹಸಿಯಿರುವಾಗಲೇ, ಉತ್ತರ ಪ್ರದೇಶ ಗೋರಖ್'ಪುರದ ಬಿಆರ್'ಡಿ ಆಸ್ಪತ್ರೆಯಲ್ಲಿ ಸಾವಿನ ರುದ್ರ ನರ್ತನ ಮುಂದುವರೆದಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷೇತ್ರವಾಗಿರುವ ಗೋರಖ್'ಪುರದ ಈ ಬಿಆರ್'ಡಿ ಆಸ್ಪತ್ರೆಯಲ್ಲಿ  ಕಳೆದ 72 ಗಂಟೆಗಳಲ್ಲಿ 61 ಮಕ್ಕಳು ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ಈ ಬಾರಿ ಮಕ್ಕಳ ಸಾವಿಗೆ ಕಾರಣ ಬೇರೆಯಾಗಿದೆ. ಎನ್ಸಿಪಾಲಿಟಿ, ನಿಮೋನಿಯಾ, ಸೆಪ್ಸಿಸ್ ಹೀಗೆ ವಿವಿಧ ಬಗೆಯ ಕಾಯಿಲೆಗಳಿಂದ ಮಕ್ಕಳು ಸಾವನಪ್ಪಿದ್ದಾರೆಂದು ಹೇಳಲಾಗಿದೆ.

ಇನ್ನೊಂದು ವರದಿಯ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ಮಕ್ಕಳ ಸಾವಿನ ಸಂಖ್ಯೆ 290ಕ್ಕೆ ತಲುಪಿದೆ.  ಅವುಗಳಲ್ಲಿ 213 ಮಕ್ಕಳು ನಿಯೋ-ನೇಟಲ್ ಐಸಿಯುನಲ್ಲಿ ಮೃತಪಟ್ಟಿದ್ದರೆ, 77 ಮಕ್ಕಳು ಎನ್ಸಿಪಾಲಿಟಿ ವಿಭಾಗದಲ್ಲಿ ಮೃತಪಟ್ಟಿದ್ದಾರೆಂದು ಬಿಆರ್'ಡಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪಿ.ಕೆ.ಸಿಂಗ್ ಹೇಳಿದ್ದಾರೆ.

ಈ ವರ್ಷದಲ್ಲಿ ಒಟ್ಟು 1250 ಮಕ್ಕಳು ಈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಪಿಟಿಐ ವರದಿ ಮಾಡಿದೆ.

(ಸಾಂದರ್ಭಿಕ ಚಿತ್ರ)

Latest Videos
Follow Us:
Download App:
  • android
  • ios