ಯಾರೋ ಕಿಡಿಗೇಡಿಗಳು ಬೇಕಂತಲೇ ಈ ಕೃತ್ಯ ಎಸಗಿದ್ದರೂ ಇರಬಹುದು ಎಂದು  ಪೊಲೀಸರು ಶಂಕಿಸಿದ್ದಾರಾದರೂ ಪ್ರಕರಣವನ್ನು ಕೂಲಂಕಶವಾಗಿ ಎಲ್ಲಾ ಸ್ತರಗಳಲ್ಲಿ ಅವಲೋಕಿಸಲು ನಿರ್ಧರಿಸಿದ್ದಾರೆ.

ತಿರುವನಂತಪುರಂ: ಇಲ್ಲಿನ ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಹುಂಡಿಯಲ್ಲಿ ಪಾಕಿಸ್ತಾನದ 20ರು. ವೌಲ್ಯದ ನೋಟೊಂದು ಪತ್ತೆಯಾಗಿದೆ. ಬೇರೆ ಬೇರೆ ದೇಶಗಳ ನೋಟು ಪತ್ತೆಯಾಗುವುದು ಸಾಮಾನ್ಯವಾದರೂ, ಇದು ಪಾಕಿಸ್ತಾನಕ್ಕೆ ಸೇರಿದ ನೋಟಾದ ಕಾರಣ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾರೋ ಕಿಡಿಗೇಡಿಗಳು ಬೇಕಂತಲೇ ಈ ಕೃತ್ಯ ಎಸಗಿದ್ದರೂ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರಾದರೂ ಪ್ರಕರಣವನ್ನು ಕೂಲಂಕಶವಾಗಿ ಎಲ್ಲಾ ಸ್ತರಗಳಲ್ಲಿ ಅವಲೋಕಿಸಲು ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ, ಪಾಕಿಸ್ತಾನದ ಕರೆನ್ಸಿಯ ನೋಟು ಈ ದೇವಸ್ಥಾನದಲ್ಲಿ ಸಿಕ್ಕಿರುವುದು ಇದೇ ಮೊದಲು.