ಈ ವಿಚಾರದಲ್ಲಿ ಪಾಕ್ ಮೀರಿಸುವುದು ಭಾರತಕ್ಕೆ ಬಹಳ ಕಷ್ಟ!

First Published 29, Jun 2018, 5:12 PM IST
Pakistani money in Swiss banks down but remains above Indian funds
Highlights

ಬೇಡದ ವಿಚಾರದಲ್ಲಿ ಪಾಕಿಸ್ತಾನ ಸದಾ ಮುಂದೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯವೆ. ಈಗ ಅದಕ್ಕೊಂದು ಹೊಸ ಸೇರ್ಪಡೆಯಾಗಿದ್ದು ಮತ್ತೊಂದು ಕುಖ್ಯಾತಿ ತನ್ನದಾಗಿಸಿಕೊಂಡಿದೆ. ಏನಿದು? ಮುಂದಕ್ಕೆ ಓದಿ...

ನವದೆಹಲಿ[ಜೂ.29]  ಸದಾ ಉಪಟಳ ನೀಡುವ ಪಾಕಿಸ್ತಾನ ಈ ಒಂದು ವಿಚಾರದಲ್ಲಿ ಭಾರತಕ್ಕಿಂತ ಮೇಲಿದೆ. ಹಾಗೆಂದು ಈ ವಿಷಯಕ್ಕೆ ಪಾಕ್ ಖುಷಿ ಪಡಬೇಕೆಂದೇನಿಲ್ಲ. ಪಾಕಿಸ್ತಾನದಲ್ಲಿ ಭಾರತಕ್ಕಿಂತಲೂ ಹೆಚ್ಚಿ ಭ್ರಷ್ಟರಿದ್ದಾರೆ.  ಸದಾ ಕುಖ್ಯಾತಿಯಲ್ಲೇ ಮುಳುಗಿರುವ ಪಾಕಿಸ್ತಾನಕ್ಕೆ ಇದೊಂದು ಹೊಸ ಸೇರ್ಪಡೆ ಅಷ್ಟೆ.

ಸ್ವಿಸ್ ಬ್ಯಾಂಕ್ ನಲ್ಲಿ ಭಾರತದ ಭ್ರಷ್ಟರು ಇಟ್ಟಿರುವುದಕ್ಕಿಂತ ಜಾಸ್ತಿ ಹಣವನ್ನು ಪಾಕಿಸ್ತಾನದವರು ಇಟ್ಟಿದ್ದಾರಂತೆ. ಪಾಕಿಸ್ತಾನದವರು ಇಟ್ಟ ಹಣ ಶೇ. 21 ರಷ್ಟು ಇಳಿಕೆಯಾಗಿದೆ. ಆದರೆ ಪಾಕ್ ನವರು ಇಟ್ಟಿರುವ ಹಣದ ಮೌಲ್ಯ ಬರೋಬ್ಬರಿ 7700 ಕೋಟಿ ರೂ.! [1.115 ಸ್ವಿಸ್ ಫ್ರಾನ್ಸ್] 2016 ರಲ್ಲಿ ಈ ಹಣ 9,500 ಸಾವಿರ ಕೋಟಿ ರೂ. ಆಗಿತ್ತು. ಸ್ವಿಸ್ ಬ್ಯಾಂಕ್ ತನ್ನ ದತ್ತಾಂಶದಲ್ಲಿ ಈ ಅಂಶವನ್ನು ಬಹಿರಂಗ ಮಾಡಿದೆ.

ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ಇಟ್ಟಿರುವ ಹಣ ಶೇ. 50ರಷ್ಟು ಹೆಚ್ಚಳವಾಗಿದೆ ಎಂಬ ಸುದ್ದಿ ನಿನ್ನೆ ಸದ್ದು ಮಾಡಿತ್ತು. ಕೇಂದ್ರ ಸರಕಾರ ಮತ್ತು ನರೇಂದ್ರ ಮೋದಿ ವಿರುದ್ಧವೂ ಸಾಮಾಜಿಕ ತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು.

 

loader