ಪ್ರಾಮಾಣಿಕತೆಗಿಂತ ದೊಡ್ಡದು ಇನ್ನೇನು ಇಲ್ಲ ಎಂದು ನಂಬಿಕೊಂಡವರು ಜಗತ್ತಿನಲ್ಲಿ ಅನೇಕ ಜನರಿದ್ದಾರೆ. ಕೆಲವೊಮ್ಮೆ ತಮ್ಮ ನಡವಳಿಕೆಯಿಂದ ಅದನ್ನು ಮತ್ತೆ ಸಾಬೀತು ಮಾಡುತ್ತಾರೆ.
ಇಸ್ಲಾಮಾಬಾದ್[ನ.19] ಇದು ಪಾಕಿಸ್ತಾನದ ಪ್ರಾಮಾಣಿಕನೊಬ್ಬನ ಕತೆ. ಕಳೆದ ವರ್ಷ ದೆಹಲಿಯ ಕ್ಯಾಬ್ ಚಾಲಕನೊಬ್ಬ 8 ಲಕ್ಷದ ಮೌಲ್ಯದ ವಸ್ತುಗಳನ್ನು ತನ್ನ ವಾಹನದಲ್ಲಿ ಬಿಟ್ಟು ಹೋಗಿದ್ದನ್ನು ಹಿಂದಿರುಗಿಸಿದ್ದ. ಈ ಬಾರಿ ಪಾಕಿಸ್ತಾನದ ಪ್ರಾಮಾಣಿಕ ಕಾರ್ಮಿಕನ ಉದಾಹರಣೆ.
ಟ್ವಿಟರ್ ನಲ್ಲಿ ಪಾಕಿಸ್ತಾನದ ಕಾರ್ಮಿಕನ ಪ್ರಾಮಾಣಿಕತೆ ಕೊಂಡಾಡಲಾಗಿದೆ. ಟ್ವಿಟರ್ ನಲ್ಲಿ ಕ್ರಿಯಾಶೀಲವಾಗಿರುವ ಜೀಶ್‌ಹಾನ್ ಖಟಕ್ ಕತೆಯನ್ನು ವಿವರವಾಗಿ ಬರೆದಿದ್ದಾರೆ.
ನನ್ನ ಮನೆ ಬಾಗಿಲನ್ನು ಬಡಿದ ಬಡ ಕಾರ್ಮಿಕನೊಬ್ಬ ನೀವು ಯಾವುದಾದರೂ ಆಭರಣವನ್ನು ಕಳೆದುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದರು. ಆದರೆ ನಾನು ಇಲ್ಲ ಎಂದು ತಿಳಿಸಿದರ. ಇದಾದ ಮೇಲೆ ಮರುದಿನ ಮತ್ತೆ ಬಾಗಿಲು ಬಡಿದ ಶಬ್ದವಾಯಿತು. ಈ ಬಾರಿ ನನ್ನ ತಮ್ಮ ಬಾಗಿಲು ತೆರೆದ. ಮೂರು ವರ್ಷಗಳ ಹಿಂದೆ ಕಿವಿಯೋಲೆ ಕಳೆದುಕೊಂಡಿದ್ದ ಘಟನೆ ನೆನಪಿಗೆ ಬಂತು. ಇದನ್ನು ತಿಳಿಸಿದಾಗ ಕಾರ್ಮಿಕ ತನ್ನ ಬಳಿಯಿದ್ದ ಕಿವಿಯೋಲೆ ಹಿಂದಕ್ಕೆ ನೀಡಿದ ೆಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಗೆ ಸಾಕಷ್ಟು ನೆಚ್ಚುಗೆ ವ್ಯಕ್ತವಾಗಿದೆ.
