ನ್ಯೂಯಾರ್ಕ್(ಅ.05): ಭಾರತದ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರನ್ನ ಸದೆಬಡಿದ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಗಮನ ಸೆಳೆಯಲು ಪಾಕಿಸ್ಥಾನ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಆದರೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ವಿಟಲಿ ಚುಕಿನ್ ಒಂದೇ ಮಾತಿನಲ್ಲಿ ಪಾಕಿಸ್ತಾನದ ವಾದವನ್ನು ತಳ್ಳಿಹಾಕಿದ್ಧಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪತ್ರಿಕಾಗೋಷ್ಠಿ ವೇಳೆ, ಪಾಕಿಸ್ತಾನ ಪತ್ರಕರ್ತನೊಬ್ಬ, ಸರ್ಜಿಕಲ್ ದಾಳಿ ಬಗ್ಗೆ ಕೇಳಿದ ಪ್ರಶ್ನೆಗೆ ನೇರವಾಗಿ ನಿರಾಕರಿಸಿದ ಅಧ್ಯಕ್ಷರು, ನಾನು ಆ ವಿಷಯದ ಬಗ್ಗೆ ಮಾತನಾಡುವುದಿಲ್ಲ, ನಾವು ಆ ವಿಷಯದ ಬಗ್ಗೆ ಮಾತನಾಡುವುದಿಲ್ಲ ೆಂದು ಬಾಯಿಮುಚ್ಚಿಸಿದ್ದಾರೆ. ಯಾಕೆ ಎಂದು ಪತ್ರಕರ್ತ ಮರುಪ್ರಶ್ನೆ ಹಾಕಿದಾಗ, ನಾನು ಭದ್ರತಾ ಮಂಡಳಿ ಅಧ್ಯಕ್ಷ. ಭಾರತ ಮತ್ತು ಪಾಕಿಸ್ತಾನದ ವಿಷಯವನ್ನ ಇಲ್ಲಿ ಚರ್ಚಿಸುವುದಿಲ್ಲ ಎಂದಿದ್ದಾರೆ.