ಪತ್ರಿಕಾ ಉದ್ಯೋಗ ಎಂಬುದು ನಿಜಕ್ಕೂ ಸವಾಲಿನ ಜವಾಬ್ದಾರಿಯೇ ಸರಿ. ಕೆಲವೊಮ್ಮೆ ಮರುಭೂಮಿ, ಕುಗ್ರಾಮ, ಕೊಳಚೆ ಪ್ರದೇಶ ಮತ್ತು ಯುದ್ಧಪೀಡಿತ ಪ್ರದೇಶಗಳಿಂದಲೂ ವರದಿಗಾರರು ನೇರ ಪ್ರಸಾರದಲ್ಲಿ ವರದಿಗಳನ್ನು ನೀಡಬೇಕಾಗುತ್ತದೆ. ಆದರೆ, ಪಾಕಿಸ್ತಾನದ ಟೀವಿ ಪತ್ರಕರ್ತನೋರ್ವ ತನ್ನ ವಿವಾಹವನ್ನೇ ಲೈವ್‌ ಆಗಿ ರಿಪೋರ್ಟ್‌ ಮಾಡಿ, ಭಾರೀ ಸುದ್ದಿಯಾಗಿದ್ದಾನೆ.
ಇಸ್ಲಾಮಾಬಾದ್: ಪತ್ರಿಕಾ ಉದ್ಯೋಗ ಎಂಬುದು ನಿಜಕ್ಕೂ ಸವಾಲಿನ ಜವಾಬ್ದಾರಿಯೇ ಸರಿ. ಕೆಲವೊಮ್ಮೆ ಮರುಭೂಮಿ, ಕುಗ್ರಾಮ, ಕೊಳಚೆ ಪ್ರದೇಶ ಮತ್ತು ಯುದ್ಧಪೀಡಿತ ಪ್ರದೇಶಗಳಿಂದಲೂ ವರದಿಗಾರರು ನೇರ ಪ್ರಸಾರದಲ್ಲಿ ವರದಿಗಳನ್ನು ನೀಡಬೇಕಾಗುತ್ತದೆ. ಆದರೆ, ಪಾಕಿಸ್ತಾನದ ಟೀವಿ ಪತ್ರಕರ್ತನೋರ್ವ ತನ್ನ ವಿವಾಹವನ್ನೇ ಲೈವ್ ಆಗಿ ರಿಪೋರ್ಟ್ ಮಾಡಿ, ಭಾರೀ ಸುದ್ದಿಯಾಗಿದ್ದಾನೆ.
ಇಲ್ಲಿನ ಸಿಟಿ 41 ವಾಹಿನಿಯಲ್ಲಿ ವರದಿಗಾರನಾಗಿರುವ ಹನಾನ್ ಬುಕಾರಿ, ತನ್ನ ಮದುವೆ ಕಾರ್ಯಕ್ರಮದ ಕುರಿತು ಲೈವ್ ಅಪ್ಡೇಟ್ ನೀಡಿದ್ದಾನೆ. ‘ಇಂದು ನನ್ನ ವಿವಾಹ ನಿಶ್ಚಯವಾಗಿದ್ದರಿಂದ ನಾನು ಮತ್ತು ನನ್ನ ಕುಟುಂಬಸ್ಥರು ತುಂಬಾ ಖುಷಿಯಾಗಿದ್ದೇವೆ. ಅಲ್ಲದೆ, ನನ್ನ ಪತ್ನಿ ಕುಟುಂಬಸ್ಥರೂ ಹರ್ಷಗೊಂಡಿದ್ದಾರೆ. ನನ್ನ ಬಹುದಿನಗಳ ಕನಸನ್ನು ನನ್ನ ಪೋಷಕರು ನೆರವೇರಿಸಿದ್ದಾರೆ,’ ಎಂದು ಹೇಳಿದ್ದಾರೆ.
ಈ ವೇಳೆ ಲೈವ್ನಲ್ಲೇ ಪತ್ನಿಗೆ ಮೈಕ್ ಹಿಡಿಯುವ ಬುಕಾರಿ, ನಿನಗಾಗಿ ಸ್ಪೋಟ್ಸ್ರ್ ಕಾರು, ಸೂಪರ್ಬೈಕ್ ಖರೀದಿಸಿದ್ದೇನೆ. ಈ ಬಗ್ಗೆ ನಿನ್ನ ಅಭಿಪ್ರಾಯವೇನು ಎಂದು ಕೇಳುತ್ತಾರೆ. ಇದಕ್ಕೆ ನನ್ನ ಆಕಾಂಕ್ಷೆಗಳನ್ನು ಪೂರೈಸಿದ್ದಕ್ಕೆ ನನಗೆ ಖುಷಿಯಾಗುತ್ತಿದೆ. ಮುಂದಿನ ದಿನಗಳಲ್ಲೂ ನನ್ನ ಎಲ್ಲ ಆಸೆಗಳನ್ನು ಪೂರೈಸುವೆ ಎಂಬ ಭರವಸೆಯಿದೆ ಎಂದು ಬುಕಾರಿ ಪತ್ನಿ ಉತ್ತರಿಸುತ್ತಾರೆ. ಈ ಮೂಲಕ ವಿವಾಹದ ಕಂಪ್ಲೀಟ್ ಡೀಟೇಲ್ಸ್ ಮುಕ್ತಾಯವಾಗುತ್ತದೆ.
