ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖವಾಜ ಮುಹಮ್ಮದ್ ಆಸೀಫ್ ಜರೆದಿದ್ದಾರೆ.

ಇಸ್ಲಾಮಾಬಾದ್(ಅ.03): ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖವಾಜ ಮುಹಮ್ಮದ್ ಆಸೀಫ್ ಜರೆದಿದ್ದಾರೆ.

‘ನಾವು (ಪಾಕಿಸ್ತಾನ) ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದ್ದೇವೆ ಎಂದು ಸುಷ್ಮಾ ಆರೋಪಿಸಿದ್ದಾರೆ. ಆದರೆ, ಓರ್ವ ಭಯೋತ್ಪಾದಕ ಸ್ವತಃ ದೇಶದ ಪ್ರಧಾನಿಯಾಗಿದ್ದಾರೆ. ಅವರ (ಮೋದಿ)ಕೈಗಳಲ್ಲಿ ಗುಜರಾತ್ ಮುಸ್ಲಿಮರ ಹತ್ಯೆಯ ರಕ್ತವಿದೆ’ ಎಂದು ಸಂದರ್ಶನವೊಂದರಲ್ಲಿ ಆಸೀಫ್ ಹೇಳಿದ್ದಾರೆ.

ಭಾರತ ‘ಯೋತ್ಪಾದಕ ಪಕ್ಷ ‘ಆರೆಸ್ಸೆಸ್’ನಿಂದ ಆಳಲ್ಪಡುತ್ತಿದೆ ಎಂದು ಆಸಿಫ್ ಹೇಳಿದ್ದಾರೆ. ಸುಷ್ಮಾ ಭಾಷಣಕ್ಕೆ ಪ್ರತಿಕ್ರಿಯಿಸುವ ನಿಟ್ಟಿನಲ್ಲಿ ಅವರು ಮಾತನಾಡಿದ್ದಾರೆ.