ಜಮ್ಮು (ಅ.06): ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನದ ಸೇನೆಯು ನಿನ್ನೆ ಸಂಜೆ ಗುಂಡಿನ ದಾಳಿ ನಡೆಸಿದೆ.

ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯ ಸುಂದರ್ಬನಿ ಸೆಕ್ಟರ್ ಹಾಗೂ ಪೂಂಛ್ ಜಿಲ್ಲೆಯ ಕೃಷ್ಣಘಾಟಿ ಸೆಕ್ಟರ್ ಬಳಿ ನಿನ್ನೆ ಸಂಜೆಯ ಬಳಿಕ ಪಾಕಿಸ್ತಾನದ ಸೇನೆಯು ಶೆಲ್ ದಾಳಿ ನಡೆಸಿದೆ.

ಪಾಕಿಸ್ತಾನದ ದಾಳಿಗೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮನೀಶ್ ಮೆಹ್ತಾ ಹೇಳಿದ್ದಾರೆ.

ಮಂಗಳವಾರದಂದು ಪಾಕಿಸ್ತಾನವು ಅಕ್ನೋರ್ ಜಿಲ್ಲೆಯ ಗಿಗ್ರಿಯಾಲ್, ಚನ್ನಿ ಮತ್ತು ಪ್ಲನ್’ವಾಲ ಪ್ರದೇಶಗಳಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು.

(ಸಾಂದರ್ಭಿಕ ಚಿತ್ರ)