ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಕೃಷ್ಣಾ ಕುಮಾರಿ ಕೊಹ್ಲಿ ಅವರು ಶೀಘ್ರದಲ್ಲೇ ಸೆನೆಟರ್‌ ಆಗಿ ಆಯ್ಕೆಯಾಗಲಿದ್ದು, ಈ ಮೂಲಕ ಅವರು ಮುಸ್ಲಿಂ ಬಾಹುಳ್ಯ ರಾಷ್ಟ್ರದ ಮೊದಲ ಹಿಂದು ಮಹಿಳೆ ಸೆನೆಟರ್‌ ಆದ ಕೀರ್ತಿಗೆ ಪಾತ್ರರಾಗಲಿದ್ದಾರೆ ಎಂದು ಆಡಳಿತಾರೂಢ ಪಾಕಿಸ್ತಾನ ಪೀಪಲ್‌ ಪಕ್ಷ ತಿಳಿಸಿದೆ.

ಲಾಹೋರ್‌: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಕೃಷ್ಣಾ ಕುಮಾರಿ ಕೊಹ್ಲಿ ಅವರು ಶೀಘ್ರದಲ್ಲೇ ಸೆನೆಟರ್‌ ಆಗಿ ಆಯ್ಕೆಯಾಗಲಿದ್ದು, ಈ ಮೂಲಕ ಅವರು ಮುಸ್ಲಿಂ ಬಾಹುಳ್ಯ ರಾಷ್ಟ್ರದ ಮೊದಲ ಹಿಂದು ಮಹಿಳೆ ಸೆನೆಟರ್‌ ಆದ ಕೀರ್ತಿಗೆ ಪಾತ್ರರಾಗಲಿದ್ದಾರೆ ಎಂದು ಆಡಳಿತಾರೂಢ ಪಾಕಿಸ್ತಾನ ಪೀಪಲ್‌ ಪಕ್ಷ ತಿಳಿಸಿದೆ.

ಅಲ್ಲದೆ, ಪಾಕಿಸ್ತಾನ ಸೆನೆಟ್‌ ಪ್ರವೇಶಿಸಲಿರುವ ಪ್ರಥಮ ದಲಿತ ಮಹಿಳೆಯಾಗಿಯೂ ಕೊಹ್ಲಿ ಆಗಲಿದ್ದಾರೆ ಎಂದು ಪಿಪಿಪಿ ವಕ್ತಾರರು ಬುಧವಾರ ಹೇಳಿಕೆ ಹೊರಡಿಸಿದ್ದಾರೆ.

ಸಿಂಧ್‌ ಪ್ರಾಂತ್ಯದ ವಿಧಾನಸಭೆಯಿಂದ ಅಲ್ಪಸಂಖ್ಯಾತ ಕೋಟಾದಡಿ ಪಾಕಿಸ್ತಾನ ಪೀಪಲ್‌ ಪಕ್ಷದಿಂದ ನಾಮ ನಿರ್ದೇಶನಗೊಂಡಿರುವ ಕೊಹ್ಲಿ (39) ಅವರ ನಾಮಪತ್ರವನ್ನು ಪಾಕಿಸ್ತಾನ ಚುನಾವಣಾ ಆಯೋಗ ಮಾನ್ಯ ಮಾಡಿದ್ದು, ಮಾ.3ರಂದು ಚುನಾವಣೆ ನಡೆಯಲಿದೆ.