ಇಸ್ಲಾಮಾಬಾದ್(ಸೆ.15): ಪನಾಮಾ ಹಗರಣ ಸಂಬಂಧ ಪ್ರಧಾನಿ ಸ್ಥಾನದಿಂದ ಅನರ್ಹಗೊಳಿಸಿರುವ ತನ್ನ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಕುಟುಂಬಸ್ಥರು ಸಲ್ಲಿಸಿದ ಮೇಲ್ಮನವಿಯನ್ನು ಅಲ್ಲಿನ ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ತನ್ನ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮಾಜಿ ಪ್ರಧಾನಿ ಷರೀಫ್ ಪುತ್ರರು, ವಿತ್ತ ಸಚಿವ ಇಶಾಕ್ ದಾರ್ ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಈ ಬಗ್ಗೆ ಸಲ್ಲಿಸಿದ್ದ ಅರ್ಜಿಗಳನ್ನು ಕಳೆದ ಸೋಮವಾರದಿಂದ ನಿರಂತರ ವಿಚಾರಣೆಗೊಳಪಡಿಸಿದ್ದ ಸುಪ್ರೀಂ, ಕೊನೆಗೆ ಆ ಎಲ್ಲ ಅರ್ಜಿಗಳನ್ನು ವಜಾ ಮಾಡಿದೆ.

ಭ್ರಷ್ಟಾಚಾರ ಮತ್ತು ಪನಾಮಾ ಹಗರಣ ಪ್ರಕರಣ ಸಂಬಂಧ ಜು.28ರಂದು ಪಾಕ್ ಪ್ರಧಾನಿ ಹುದ್ದೆಯಿಂದ ನವಾಜ್ ಷರೀಫ್ ಅವರನ್ನು ಸುಪ್ರೀಂ ಕೋರ್ಟ್ ಅನರ್ಹಗೊಳಿಸಿತ್ತು.